ನ್ಯೂಸ್

ವೆರಾಂಡಾ ಲರ್ನಿಂಗ್ ಸೊಲ್ಯೂಷನ್ಸ್ ಕಂಪನಿಗೆ ಲಾಭ

Bengaluru - Political - Shivananda Tagadur

ಚೆನ್ನೈ:
ವೆರಾಂಡಾ ಲರ್ನಿಂಗ್ ಸೊಲ್ಯೂಷನ್ಸ್ ಕಂಪನಿಯು 118.99 ಕೋಟಿ ರೂ ವಹಿವಾಟು ನಡೆಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.72.69ರಷ್ಟು ಪ್ರಗತಿ ಸಾಧಿಸಿದೆ. ಕಳೆದ ವರ್ಷ 68.90 ಕೋಟಿ ರೂ ವಹಿವಾಟು ಅಂದರೆ ಶೇ. ನಡೆಸಲು ಸಾಧ್ಯವಾಗಿತ್ತು.
ಕಂಪನಿಯು ಪ್ರಭಾವಶಾಲಿಯಾಗಿ ಬೆಳೆದಿದ್ದು, ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ತಕ ಎಂಡ್-ಟು-ಎಂಡ್ ಶಿಕ್ಷಣ ಸೇವೆಗಳನ್ನು ಒದಗಿಸುತ್ತಿದೆ.
ಜೂನ್ 2024 ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಅದರ ಹಣಕಾಸಿನ ವಹಿವಾಟು ಪ್ರಕಟಗೊಂಡಿದ್ದು, ಕಂಪನಿಯು ತನ್ನ ಪ್ರಭಾವಶಾಲಿ ಬೆಳವಣಿಗೆಯನ್ನು ಉಳಿಸಿಕೊಂಡಿರುವುದಷ್ಟೆ ಅಲ್ಲ, ಅತ್ಯಾಕರ್ಷಕ ಲಾಭವನ್ನು ಪಡೆದಿದೆ. ಆ ಮೂಲಕ ಅವಕಾಶಗಳು ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುವುದನ್ನು ಮುಂದುವರೆಸಿದೆ.
ಹೆಚ್ಚುವರಿಯಾಗಿ, ಕಂಪನಿಯು ಹಿಂದೆ ಮಾಡಿದ್ದ 98.70 ಕೋಟಿ ರೂ ಆದಾಯವನ್ನು ಮೀರಿಸಿದ್ದು, ಅದರ ಸ್ಥಾನವನ್ನು ಗಟ್ಟಿಯಾಗಿ ಉಳಿಸಿಕೊಂಡಿದೆ. ತ್ರೈಮಾಸಿಕಗಳಲ್ಲಿ ಕಂಪನಿಯ ಒಟ್ಟು ನಗದು ಸಂಗ್ರಹ 150 ಕೋಟಿ ರೂ ದಾಟಿರುವುದು ವಿಶೇಷ.
ಬಡ್ಡಿ, ತೆರಿಗೆ, ಸವಕಳಿ ಮತ್ತು ಭೋಗ್ಯದ ಮೊದಲು ಗಳಿಕೆಗಳಲ್ಲಿ (ಉಆಐಈಅ) ತ್ರೈಮಾಸಿಕಕ್ಕೆ 27.61 ಕೋಟಿ ರೂ ಗಳಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಅವಧಿಯಲ್ಲಿ 5.64 ಕೋಟಿ ರೂ
ವರದಿಯಾಗಿದೆ. ಈ ಗಣನೀಯ ಹೆಚ್ಚಳವು ಕಂಪನಿಯ ಬೆಳವಣಿಗೆಯನ್ನು ಎತ್ತಿ ತೋರಿಸುತ್ತದೆ.
ಕಾರ್ಯಾಚರಣೆಯ ದಕ್ಷತೆ ಮತ್ತು ಅದರ ಕಾರ್ಯತಂತ್ರಗಳ ಪರಿಣಾಮಕಾರಿ ಕಾರ್ಯಗತಗೊಳಿಸುವಿಕೆಯಿಂದಾಗಿ ಉತ್ತಮ ಪ್ರಗತಿ ಸಾಧ್ಯವಾಗಿದೆ. ವೆರಾಂಡಾ ಗ್ರೂಪ್ ಕಂಪನಿಯಲ್ಲಿ ತರಬೇತಿ ಪಡೆದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 113,262 ಕ್ಕೆ ತಲುಪಿರುವುದು ಕೂಡ ವಿಶೇಷ ಸಾಧನೆಯಾಗಿದೆ.