ನ್ಯೂಸ್

ಸಂಭ್ರಮದ ವೇಣುಗೋಪಾಲಸ್ವಾಮಿ ಜಾತ್ರೆ

ಸರಗೂರು: ಸಮೀಪದ ಹುಲಿಕುರ ಗ್ರಾಮದಲ್ಲಿ ಬುಧವಾರ ಶ್ರೀ ವೇಣುಗೋಪಾಲಸ್ವಾಮಿ ಜಾತ್ರೆ ವಿಜೃಂಭಣೆಯಿಂದ ನೆರವೇರಿತು.


ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನವನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ವಾದ್ಯಗೋಷ್ಠಿಗಳು ಮೊಳಗಿದವು. ಸತ್ತಿಗೆಗಳ ಮೆರವಣಿಗೆ ನಡೆಯಿತು. ದೇವರ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಸಾಗಿ ಬಂತು. ಈ ವೇಳೆ ಭಕ್ತರು ಹಣ್ಣು, ಧವನ ಎಸೆದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.


ದಾಸ ಗುಡ್ಡರು ದೊಣ್ಣೆ ವರಸೆ ಹಾಡಿದರು. ಇನ್ನು ಕೆಲವರು ದೇವರಿಗೆ ಹೊತ್ತ ಹರಕೆ ತೀರಿಸಿದರು. ಸರಗೂರು ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಹಿಸಿದ್ದರು. ದೇವಸ್ಥಾನದ ಪ್ರಧಾನ ಆರ್ಚಕ ವೇಣುಗೋಪಾಲ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.


ದೇವಸ್ಥಾನ ಸಮಿತಿ ಅಧ್ಯಕ್ಷ ಸ್ವಾಮಿ, ಕಾರ್ಯದರ್ಶಿ ಬಾಲಕೃಷ್ಣ, ಗೌರವಾಧ್ಯಕ್ಷ ಪದ್ಮರಾಜ್, ನಿರ್ದೇಶಕರಾದ ವೇಣುಗೋಪಾಲ್, ಖಜಾಂಚಿ ಮೋಹನ್‌ರಾಜ್, ಹನುಮಶೆಟ್ಟಿ, ಎನ್.ರಮೇಶ್, ಬಿ.ಸಿ.ಬಸಪ್ಪ, ಕೆ.ಚಿಕ್ಕವೀರನಾಯಕ, ಚಿಕ್ಕದೇವನಾಯಕ, ನವನೀತ್, ನಿರಂಜನ್‌ರಾಜ್ ಅರಸ್, ಗೋವಿಂದೇಗೌಡ, ರವಿಕುಮಾರ್, ಅಭಿಕುಮಾರ್, ಬಾಲಕೃಷ್ಣ, ಗೋಪಾಲಯ್ಯ, ಗೋವಿಂದನಾಯಕ ಹಾಜರಿದ್ದರು.