ನ್ಯೂಸ್

ವೀರಶೈವಾಗಮ

ಸುದೀಪ್​ ವಿ.ಎನ್​
ನೈಮಿತ್ತಿಕಾನಾಂ ನಿತ್ಯಾನಾಮನ್ಯೇಷಾಂ ಕರ್ಮಣಾಂ ಪುನಃ| ಆಶೌಚಮೂಲಸಂಕೋಚಸ್ತುಲ್ಯ ಏವ ಹ್ಯದೀಕ್ಷಿತೈಃ ||

ನಿತ್ಯ, ನೈಮಿತ್ತಿಕ ಮತ್ತು ಇತರ ಕರ್ಮಗಳ ವಿಷಯದಲ್ಲಿ ದೀಕ್ಷಿತನಾಗದ ವ್ಯಕ್ತಿಗಳಂತೆ ದೀಕ್ಷಿತನಾದ ವ್ಯಕ್ತಿಗೂ ಅಶೌಚದಿಂದುಂಟಾದ ನಿಯಮಗಳು ಸಮಾನವಾಗಿರುತ್ತವೆ. ‘ಅಕರಣೇ ಪ್ರತ್ಯವಾಯತ್ವಂ ನಿತ್ಯ ಕರ್ಮತ್ವಂ’ ಎಂಬ ಲಕ್ಷಣದ ಮೇರೆಗೆ ಯಾವುದನ್ನು ಮಾಡದೇ ಇರುವುದರಿಂದ ಪಾಪ ಉಂಟಾಗುವುದೋ ಅದನ್ನು ನಿತ್ಯ ಕರ್ಮವೆಂದು ಕರೆಯುತ್ತಾರೆ. ಇದರಂತೆ ಯಾವುದೋ ಒಂದನ್ನು ನಿಮಿತ್ತವಾಗಿರಿಸಿಕೊಂಡು ಮಾಡುವ ಧಾರ್ವಿುಕ ಕ್ರಿಯೆಗಳಿಗೆ ನೈಮಿತ್ಯ ಕರ್ಮವೆಂದು ಕರೆಯುತ್ತಾರೆ.

ಇದಲ್ಲದೆ ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳ ಉಪಶಮನಕ್ಕಾಗಿ ಮಾಡುವ ಕರ್ಮಗಳನ್ನು ಪ್ರಾಯಶ್ಚಿತ್ತ ಕರ್ಮವೆಂದು ಕರೆಯುತ್ತಾರೆ. ಇಷ್ಟಲಿಂಗ ಪೂಜೆಯನ್ನು ಹೊರತುಪಡಿಸಿ ಇಂತಹ ನಿತ್ಯ ನೈಮಿತ್ತಿಕ ಮಂತಾದ ಬೇರೆ ಕರ್ಮಗಳನ್ನು ಮಾಡುವಾಗ ದೀಕ್ಷಿತನಾಗದೇ ಇರುವ ವ್ಯಕ್ತಿಯು ಅಶೌಚದ ಅವಧಿಯಲ್ಲಿ ಯಾವ ತೆರನಾದ ನಿಯಮಗಳನ್ನು ಆಚರಿಸುತ್ತಾನೋ, ದೀಕ್ಷಿತನಾದ ವ್ಯಕ್ತಿಯು ಕೂಡ ಅದೇ ತೆರನಾದ ನಿಯಮಗಳನ್ನು ಪರಿಪಾಲನೆ ಮಾಡಬೇಕಾಗುತ್ತದೆ.

| ಮುಕುಟಾಗಮ (ಚರ್ಯಾಪಾದ)-10. 9/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.