ನ್ಯೂಸ್

ವೀರಶೈವಾಗಮ

ಸುದೀಪ್​ ವಿ.ಎನ್​
ಧೃತಧೌತಾಂಬರೋ ಭೂಮ್ಯಾಮಾಸೀನಶ್ಚ ಕುಶಾಸನೇ | ಉದ್ಧೂಲನಂ ತ್ರಿಪುಂಡ್ರಾಣಿ ಧೃತ್ವಾ ಭೂತ್ವಾ ಯಥೋದಿತಮ್ ರುದ್ರಾಕ್ಷಾನ್ ಬಿಭೃಯಾದೇವ ಶಿರಃಕಂಠಕರಾದಿಷು ||

ಪ್ರಾಣ ತ್ಯಾಗದ ಸಮಯದಲ್ಲಿ ಬುದ್ಧಿಯು ಶಿವಮಯಗೊಳ್ಳಬೇಕಾದರೆ, ಶ್ರದ್ಧೆಯಿಂದ ಶಾಸ್ತ್ರೋಕ್ತ ಪದ್ಧತಿಯಂತೆ ವಿಭೂತಿ ರುದ್ರಾಕ್ಷಾದಿಗಳನ್ನು ಧರಿಸಿಕೊಳ್ಳುವುದು ಕೂಡ ಶ್ರೇಷ್ಠ ಮತ್ತು ಸರಳವಾದ ಸಾಧನವಾಗಿದೆ. ಆ ಸಮಯದಲ್ಲಿ ಸ್ನಾನ ಮಾಡಿದ ನಂತರ ಶುಭ್ರವಸ್ತ್ರ ಧರಿಸಿ, ನೆಲದ ಮೇಲೆ ದರ್ಭಾಸನವನ್ನು ಹಾಕಿ ಕುಳಿತುಕೊಳ್ಳಬೇಕು. ನಂತರ ವಿಧಿಯಂತೆ ದೇಹದ ತುಂಬೆಲ್ಲ ಭಸ್ಮದ ಉದ್ಧೂಲನ ಮಾಡಿಕೊಂಡು ತ್ರಿಪುಂಡ್ರವನ್ನು ಧರಿಸಿಕೊಳ್ಳಬೇಕು. ಮಧ್ಯದ ಮೂರು ಬೆರಳುಗಳಿಂದ ದೇಹದ ವಿಭಿನ್ನ ಅಂಗಾಂಗಗಳಲ್ಲಿ ವಿಭೂತಿಯನ್ನು ಧರಿಸಿಕೊಳ್ಳುವುದು ತ್ರಿಪುಂಡ್ರಧಾರಣೆ ಎಂದು ಕರೆಯಲ್ಪಡುತ್ತದೆ. ಹೀಗೆ ಭಸ್ಮದ ಧಾರಣೆಯ ನಂತರ ಶಿರಸ್ಸು, ಕುತ್ತಿಗೆ, ಕೈ ಮೊದಲಾದ ಸ್ಥಾನಗಳಲ್ಲಿ ರುದ್ರಾಕ್ಷಗಳನ್ನು ಧರಿಸಿಕೊಳ್ಳಬೇಕು

| ಮುಕುಟಾಗಮ (ಚರ್ಯಾಪಾದ)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.