ನ್ಯೂಸ್

ವೀರಶೈವಾಗಮ

ಸುದೀಪ್​ ವಿ.ಎನ್​
ಆಯುಃ ಪ್ರಜಾಂ ಧನಂ ವಿದ್ಯಾಂ ಸ್ವರ್ಗಂ ಮೋಕ್ಷಂ ಸುಖಾನಿ ಚ| ಪ್ರಯಚ್ಚಂತು ತಥಾ ರಾಜ್ಯಂ ಪ್ರೀತ್ಯಾ ನೃಣಾಂ ಪಿತಾಮಹಾಃ| ಇತ್ಯುಕ್ತಾ್ವ ಗಚ್ಛತೋ ವಿಪ್ರಾನಾಸೀಮಾಂತಮನುವ್ರಜೇತ್||

ವಾರ್ಷಿಕ ಆರಾಧನೆಯಲ್ಲಿ ಸಂತೃಪ್ತಿಯಾಗುವಂತೆ ಪ್ರಸಾದವನ್ನು ಸ್ವೀಕರಿಸಿದ ನಂತರ ಮಾಹೇಶ್ವರರು ಕರ್ತೃವಿಗೆ ದೀರ್ಘಾಯಸ್ಸು, ಸಂತಾನ, ಧನ, ವಿದ್ಯೆ, ಸ್ವರ್ಗ, ಮೋಕ್ಷ ಮತ್ತು ನಾನಾ ಬಗೆಯ ಐಹಿಕ ಸುಖಗಳನ್ನು ಹಾಗೆಯೇ ರಾಜ್ಯವನ್ನು ಸಂತುಷ್ಟರಾದ ಪಿತಾಮಹರುಗಳು ನೀಡಲಿ ಎಂದು ಶುಭ ಹಾರೈಕೆಗಳನ್ನು ನೀಡಬೇಕು. ಹೀಗೆ ಸನ್ಮಂಗಲಗಳನ್ನು ನೀಡಿ, ಹೊರಡುತ್ತಿರುವ ಮಾಹೇಶ್ವರರನ್ನು ಊರಿನ ಗಡಿಯವರೆಗೆ ಅವರ ಜೊತೆಗೆ ಹೋಗುವ ಮೂಲಕ ಗೌರವ ಪೂರ್ವಕ ಬೀಳ್ಕೊಡಬೇಕು.

ನೀಡುವ ಎಲ್ಲಾ ಆಶೀರ್ವಾದಗಳು ಸಂಪೂರ್ಣವಾಗಿ ಫಲಕಾರಿಯಾಗುತ್ತವೆ ಎಂದಾಗಲಿ ಅಥವಾ ಯಾವುದೂ ನೆರವೇರುವುದೇ ಇಲ್ಲ ಎಂದಾಗಲಿ ಹೇಳಲು ಬರುವುದಿಲ್ಲ. ಕೆಲವು ಈಡೇರಬಹುದು ಕೆಲವು ಈಡೇರದೇ ಇರಬಹುದು, ಆದರೆ ಆಶೀರ್ವಾದವನ್ನು ಕೊಡುವಾಗ ಕಂಜೂಸತನ ಮಾಡಬಾರದು, ಬದಲಾಗಿ ಎಲ್ಲ ತೆರನಾದ ಒಳ್ಳೆಯದನ್ನು ಹಾರೈಸಬೇಕು.

| ಮುಕುಟಾಗಮ (ಚರ್ಯಾಪಾದ) -9.44)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.