ಜಂಗಮರಾದವರು ವಾರ್ಷಿಕ ಆರಾಧನೆಯ ಸಂದರ್ಭದಲ್ಲಿ ಕರ್ತೃವಿನ ಆಮಂತ್ರಣದ ಮೇರೆಗೆ ಅವರ ಮನೆಗೆ ಹೋಗಿ ಊಟ ಮಾಡುವಾಗ ಅಲ್ಲಿ ತಯಾರಿಸಲಾದ ಪದಾರ್ಥಗಳಲ್ಲಿ ತಮಗೆ ಇಷ್ಟ ವಾದ ತಿಂಡಿ-ತಿನಿಸುಗಳನ್ನು ಕೇಳಿ ನೀಡಿಸಿಕೊಳ್ಳಬೇಕು ಮತ್ತು ಅವುಗಳಲ್ಲಿ ತಮಗೆ ಇಷ್ಟವಿಲ್ಲದ ಪದಾರ್ಥಗಳಿದ್ದರೆ, ಅವುಗಳನ್ನು ಬೇಡವೆಂದು ನಿರಾಕರಿಸ ಬೇಕು.
ಒಟ್ಟಿನಲ್ಲಿ ಶಾಂತಚಿತ್ತದಿಂದ ಸುಖವಾಗಿ ಕುಳಿತು ಊಟ ಮಾಡಬೇಕು. ಪೂರ್ವಜರ ಆತ್ಮೋನ್ನತಿಗಾಗಿ ಕರ್ತೃವು ವಾರ್ಷಿಕ ಆರಾಧನೆಯನ್ನು ಮಾಡುತ್ತಿರುವುದರಿಂದ ಅಲ್ಲಿ ಶಿವ ಸ್ವರೂಪರಾದ ಮಾಹೇಶ್ವರರು ತೃಪ್ತಿಯಿಂದ ಇರುವುದು ಅತ್ಯಂತ ಮುಖ್ಯವಾಗಿರುತ್ತದೆ. ಅಲ್ಲಿ ಊಟ ಮಾಡುವಾಗ ಇಷ್ಟವಾದ ಪದಾರ್ಥಗಳನ್ನು ಸಂಕೋಚ ಮಾಡಿಕೊಂಡು ನೀಡಿಸಿಕೊಳ್ಳದೆ ಇರುವುದರಿಂದ ಮತ್ತು ಬೇಡವಾದ ಪದಾರ್ಥಗಳನ್ನು ಒಲ್ಲದ ಮನಸ್ಸಿನಿಂದ ಉಣ್ಣುವುದರಿಂದ ಮನಸ್ಸು ಅಸಂತೃಪ್ತವಾಗುತ್ತದೆ. ಇವರು ಇಲ್ಲಿ ಅಸಂತೃಪ್ತರಾದರೆ ಅಲ್ಲಿ ಪೂರ್ವಜರ ಆತ್ಮವು ಹೇಗೆ ತಾನೆ ತೃಪ್ತವಾಗಲು ಸಾಧ್ಯ? ಆದ್ದರಿಂದ ಇಲ್ಲಿ ಜಂಗಮರು ಭೋಜನದಿಂದ ಸಂತೃಪ್ತಿ ಭಾವ ಹೊಂದಿದವರಾಗಬೇಕು.
| ಮುಕುಟಾಗಮ (ಚರ್ಯಾಪಾದ) -9.35)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.