ತನ್ನ ಸೋದರರೆಲ್ಲರೂ ತಂದೆಯ ಉತ್ತರಕ್ರಿಯಾದಿಗಳನ್ನು ಮಾಡುತ್ತಿರುವಾಗ ಅವರ ಸಹೋದರರಲ್ಲಿ ಯಾರಾದರೂ ದೂರದಲ್ಲಿದ್ದ ಕಾರಣ ಒಂದು ವೇಳೆ ಸಮಾಧಿ ಸಂಸ್ಕಾರದ ಸಮಯಕ್ಕೆ ಬರಲು ಸಾಧ್ಯವಾಗದೆ ನಂತರದ ಹತ್ತು ದಿನಗಳೊಳಗೆ ಬಂದರೆ, ಆಗ ಅವನು ಸಮಾಧಿ ಸಂಸ್ಕಾರವು ಪೂರ್ಣಗೊಂಡಿರುವುದರಿಂದ ಅದೊಂದನ್ನು ಬಿಟ್ಟು ಸಮಾಧಿಯ ನಂತರ ಮತ್ತು ತಾನು ಬರುವ ಪೂರ್ವದ ದಿನಗಳಲ್ಲಿ ಆಚರಿಸಿರುವ ಕ್ರಿಯೆಗಳೆಲ್ಲವನ್ನು ಮಾಡಬೇಕು ಮತ್ತು ಅವನು ಬಂದ ನಂತರ ಮಾಡಲಿರುವ ಮುಂದಿನ ಉಳಿದ ಕರ್ಮಗಳನ್ನು ತನ್ನ ಸೋದರರೊಡನೆ ಒಟ್ಟಿಗೆ ಸೇರಿಕೊಂಡು ಆಚರಿಸಬೇಕು. ಬಹುತೇಕವಾಗಿ ಎಲ್ಲ ಧರ್ಮಶಾಸ್ತ್ರ ಗ್ರಂಥಗಳಲ್ಲಿಯೂ ಇದೇ ವಿಧವಾದ ವಿಧಾನವು ಕಂಡು ಬರುತ್ತದೆ. ಅದ್ದರಿಂದ ಸಹೋದರರೆಲ್ಲರೂ ಈ ವಿಷಯದಲ್ಲಿ ಇದನ್ನೆ ಅನುಸರಿಸಬೇಕು.
| ಮುಕುಟಾಗಮ (ಚರ್ಯಾಪಾದ) -8. 2)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.