ನ್ಯೂಸ್

ವೀರಶೈವಾಗಮ

ವಿಶ್ವೇದೇವಾನ ಪೂಜ್ಯಂತೇ ನಾಭಿಶ್ರವಣ ಮುಚ್ಯತೇ| ಪ್ರದಕ್ಷಿಣಂ ವಿಸರ್ಗಶ್ಚ ಸೀಮಾಂತಗಮನಂ ನಹಿ || ಏಕಾದಶೇಹಿ ಮಾಹೇಶಾನೇಕಾದಶ ಸುಭೋಜಯೇತ್| ಯಥಾಸಂಭವಮೇತದ್ಧಿ ರುದ್ರಾರಾಧನಮೀರಿತಮ್|

ವೀರಶೈವ ಧರ್ಮದ ಪ್ರಕಾರ ಅಂತ್ಯ ವಿಧಿಗೆ ಸಂಬಂಧಿಸಿದ ಆಚರಣೆಯನ್ನು ನಿರ್ವಹಿಸುವ ಸಂದರ್ಭದಲ್ಲಿ ವಿಶ್ವದೇವ ದೇವತೆಗಳ ಪೂಜೆಯನ್ನಾಗಲಿ ಮತ್ತು ‘ಅಭಿಶ್ರವಣ’ವನ್ನಾಗಲಿ ಮಾಡಬೇಕೆಂಬ ನಿಯಮ ವಿಧಿಸಲಾಗಿಲ್ಲ. ಶ್ರಾದ್ಧದ ಸಂದರ್ಭದಲ್ಲಿ ಭೋಜನಕ್ಕಾಗಿ ಕುಳಿತ ಬ್ರಾಹ್ಮಣರು ಹೇಳುವ ವೇದಮಂತ್ರಗಳ ಉಚ್ಚಾರಣೆಯನ್ನು ‘ಅಭಿಶ್ರವಣ’ ಎಂದು ಕರೆಯು ತ್ತಾರೆ. ವೀರಶೈವ ಸಿದ್ಧಾಂತದ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಇದರ ಅಗತ್ಯವಿರುವುದಿಲ್ಲ. ಇದರಂತೆ ಪ್ರದಕ್ಷಿಣೆ, ವಿಸರ್ಗ ಅಥವಾ ಸೀಮಾಂತಗಮನಗಳನ್ನು ಮಾಡಬೇಕೆಂದು ಹೇಳಲಾಗಿಲ್ಲ. ಆದರೆ ಈ ಸಂದರ್ಭದಲ್ಲಿ ಹನ್ನೊಂದನೆಯ ದಿನ ಹನ್ನೊಂದು ಜನ ಜಂಗಮರನ್ನು ಕರೆದು ತನ್ನ ಶಕ್ತ್ಯಾನುಸಾರ ರುಚಿಕರವಾದ ಭೋಜನವನ್ನು ಆಚರಿಸುವ ವಿಧಿಗೆ ರುದ್ರಾರಾಧನೆ ಎಂದು ಹೆಸರು. ಇದನ್ನು ಅವಶ್ಯವಾಗಿ ಮಾಡಬೇಕು.

| ಮುಕುಟಾಗಮ (ಚರ್ಯಾಪಾದ -6. 9-10)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.