ನ್ಯೂಸ್

ವೀರಶೈವಾಗಮ

ಸುದೀಪ್​ ವಿ.ಎನ್​

ಚತುರಸ್ರಂ ಪಂಚಪಾದಂ ದೀರ್ಘಂ ವಿಸ್ತಾರಮೇವ ಚ |

ಖಾತಂ ನವಪದಂ ತ್ವಾದ್ಯಂ ಸೋಪಾನಂ ಚೈಕಪಾದಕಮ್ |

ದ್ವಿತೀಯಂ ದ್ವಿಪದಂ ಪೋ›ಕ್ತಂ ತೃತೀಯಂ ತ್ರಿಪದಂ ತಥಾ ||

ವೇದಿಕಾ ಚ ತ್ರಿಪಾದೇನ ತಸ್ಯ ದಕ್ಷಿಣತೋ ದಿಶಿ |

ತ್ರಿಕೋಣಂ ಚ ಪ್ರಕರ್ತವ್ಯಂ ತ್ರಿಪಾದಂ ದೀರ್ಘಮಾಯತಮ್ ||

ಸಮಾಧಿಯ ಅಳತೆ ಹಾಗೂ ರಚನೆಯ ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ. ಸಮಾಧಿಯು ಚೌಕಾಕಾರವಾಗಿದ್ದು, ಉದ್ದ ಮತ್ತು ಅಗಲವು ಐದು ಹೆಜ್ಜೆ ಹಾಗೂ ಆಳವು ಒಂಬತ್ತು ಹೆಜ್ಜೆ ಇರಬೇಕು, ಇದರಲ್ಲಿ ಇಳಿದು ಹೋಗಲು ನಿರ್ವಿುಸುವ ಮೆಟ್ಟಿಲುಗಳಲ್ಲಿ ಮೊದಲನೆಯ ಮೆಟ್ಟಿಲು ಒಂದು ಹೆಜ್ಜೆ, ಎರಡನೆಯದು ಎರಡು ಹೆಜ್ಜೆ ಮತ್ತು ಮೂರನೆಯದು ಮೂರು ಹೆಜ್ಜೆಗಳಿರಬೇಕು ಎಂದು ಹೇಳಲಾಗಿದೆ. ಇದಲ್ಲದೆ ಸಮಾಧಿಯ ಒಳಗೆ ಅದರ ದಕ್ಷಿಣ ದಿಕ್ಕಿನಲ್ಲಿ ಮೂರು ಹೆಜ್ಜೆಗಳಷ್ಟು ಉದ್ದ ಮತ್ತು ಅಗಲವುಳ್ಳ ಒಂದು ತ್ರಿಕೋಣಾಕಾರದ ರಂಧ್ರವನ್ನು ಅಗೆಯಬೇಕು. ನಂತರ ಅದರ ಒಳಗಡೆ ಮೂರು ಹೆಜ್ಜೆ ಉದ್ದ ಮತ್ತು ಮೂರು ಹೆಜ್ಜೆ ಅಗಲವುಳ್ಳಂತೆ ಪಾರ್ಥಿವ ದೇಹವನ್ನು ಇರಿಸಲು ಅನುಕೂಲವಾಗುವ ರೀತಿಯಲ್ಲಿ ವೇದಿಕೆಯನ್ನು ನಿರ್ವಿುಸಬೇಕು.

| ಮುಕುಟಾಗಮ (ಚರ್ಯಾಪಾದ -4. 3-4 / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.