ಪ್ರಾಣ ತ್ಯಾಗದ ಸಮಯದಲ್ಲಿ ಬುದ್ಧಿಯು ಶಿವಮಯಗೊಳ್ಳಬೇಕಾದರೆ, ಶ್ರದ್ಧೆಯಿಂದ ಶಾಸ್ತ್ರೋಕ್ತ ಪದ್ಧತಿಯಂತೆ ವಿಭೂತಿ ರುದ್ರಾಕ್ಷಾದಿಗಳನ್ನು ಧರಿಸಿಕೊಳ್ಳುವುದು ಕೂಡ ಶ್ರೇಷ್ಠ ಮತ್ತು ಸರಳವಾದ ಸಾಧನವಾಗಿದೆ. ಆ ಸಮಯದಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಿದ ನಂತರ ಶುಭ್ರವಾದ ವಸ್ತ್ರವನ್ನು ಧರಿಸಿ, ನೆಲದ ಮೇಲೆ ದರ್ಭಾಸನವನ್ನು ಹಾಕಿ ಅದರ ಮೇಲೆ ಕುಳಿತುಕೊಳ್ಳಬೇಕು.
ನಂತರ ವಿಧಿಯಂತೆದೇಹದ ತುಂಬೆಲ್ಲ ಭಸ್ಮದ ಉದ್ಧೂಲನ ಮಾಡಿಕೊಂಡು ತ್ರಿಪುಂಡ್ರವನ್ನು ಧರಿಸಿಕೊಳ್ಳಬೇಕು. ಭಸ್ಮದ ಕಣಗಳನ್ನು ದೇಹದ ವಿಭಿನ್ನ ಭಾಗಗಳಲ್ಲಿ ವಿಭಿನ್ನ ಮಂತ್ರಗಳನ್ನು ಉಚ್ಛರಿಸುತ್ತ ಪ್ರೋಕ್ಷಿಸಿಕೊಳ್ಳುವುದು ಭಸ್ಮೋದ್ಧೂಲನವೆಂದು ಕರೆಯಲ್ಪಡುತ್ತದೆ. ಮಧ್ಯದ ಮೂರು ಬೆರಳುಗಳಿಂದದೇಹದ ವಿಭಿನ್ನ ಅಂಗಾಂಗಗಳಲ್ಲಿ ವಿಭೂತಿಯನ್ನು ಧರಿಸಿಕೊಳ್ಳುವುದು ತ್ರಿಪುಂಡ್ರಧಾರಣೆ ಎಂದು ಕರೆಯಲ್ಪಡುತ್ತದೆ. ಹೀಗೆ ಭಸ್ಮದ ಧಾರಣೆಯ ನಂತರ ಶಿರಸ್ಸು, ಕುತ್ತಿಗೆ, ಕೈ ಮೊದಲಾದ ಸ್ಥಾನಗಳಲ್ಲಿ ರುದ್ರಾಕ್ಷಗಳನ್ನು ಧರಿಸಿಕೊಳ್ಳಬೇಕು.
| ಮುಕುಟಾಗಮ (ಚರ್ಯಾಪಾದ) 2. 3/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.