ನಿರ್ವಲ್ಯ ನಿರ್ಮಲಂ ಶುದ್ಧಂ ನಿರ್ಮಲತ್ಪಾದನಿಂದಿತಮ್ | ತಸ್ಮಾದಭೋಜ್ಯಂ ನಿರ್ವಲ್ಯಮಶುದ್ಧೈರಶಿವಾತ್ಮಕೈಃ || ಅಶುದ್ಧಾತ್ಮಾ ಶುದ್ಧಿಲೋಭಾನ್ಮದ್ಭುಕ್ತಂ ಪಾವನಂ ಪರಮ್ | ಭಕ್ಷಯನ್ನಾಶಮಾಪ್ರೋತಿ ರಸಭೋಕ್ತಾ ಯಥಾ ದ್ವಿಜಃ ||
‘ಶಿವನಿಮಾಲ್ಯ(ಪ್ರಸಾದ)’ವು ನಿರ್ಮಲವೂ, ಶುದ್ಧವೂ ಆಗಿರುವುದರಿಂದ ಅದು ಅನಿಂದಿತವಾಗಿರುತ್ತದೆ. ಆದ್ದರಿಂದಲೇ ಅದನ್ನು ನಿರ್ವಲ್ಯವೆಂದು ಕರೆಯುತ್ತಾರೆ. ಇದನ್ನು ಅಶುದ್ಧರೂ ಹಾಗೂ ಅಮಂಗಳಕರವಾದ ಭಾವವುಳ್ಳವರೂ ಸ್ವೀಕರಿಸಬಾರದು. ಅಶುದ್ಧನಾದವನು ಶುದ್ಧಿಯಾಗಬೇಕೆಂಬ ಲೋಭದಿಂದ ಪರಮ ಪಾವನವಾದ ಶಿವ ನಿರ್ವಲ್ಯವನ್ನು ಸ್ವೀಕರಿಸಿದರೆ, ಅಂಥವನು ಮಧ್ಯಪಾನ ಮಾಡಿದ ಬ್ರಾಹ್ಮಣನಂತೆ ನಾಶವಾಗುತ್ತಾನೆ. ‘ಅನ್ನಶುದ್ಧ್ಯಾ ಹಿ ಸರ್ವೆಷಾಂ ಸತ್ವಶುದ್ಧಿರುದಾಹೃತಾ’ ಎಂಬ ಸಿದ್ದಾಂತ ಶಿಖಾಮಣಿಯ ಉಕ್ತಿಯಂತೆ ನಾವು ಸ್ವೀಕರಿಸುವ ಅನ್ನದ ಶುದ್ಧಿಯಿಂದಲೇ ಮನಸ್ಸಿನ ಶುದ್ಧಿಯಾಗುವುದು. ಕೇವಲ ಭೌತಿಕವಾಗಿ ಅನ್ನವನ್ನು ಶುದ್ಧಗೊಳಿಸಿದರೆ ಸಾಲದು, ಬದಲಾಗಿ ಭಾವನಾತ್ಮಕವಾಗಿಯೂ ಅನ್ನವನ್ನು ಶುದ್ಧಗೊಳಿಸಬೇಕಾಗುತ್ತದೆ. ಅದಕ್ಕಾಗಿ ಅನ್ನವನ್ನು ಪ್ರಸಾದ ರೂಪದಲ್ಲಿ ಪರಿವರ್ತನೆ ಮಾಡಿಕೊಂಡು ಪವಿತ್ರ ಭಾವದಿಂದ ಅದನ್ನು ಸ್ವೀಕರಿಸಬೇಕು.
| ಮುಕುಟಾಗಮ (5. 18)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.