ನ್ಯೂಸ್

VIDEO| ವೀರಶೈವ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ 19 ಭಾಷೆಗಳ ನೂತನ ಮೊಬೈಲ್​ ಆ್ಯಪ್​ ಬಿಡುಗಡೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ವಾರಾಣಸಿ: ಹರ ಹರ ಮಹಾದೇವ. ಎಲ್ಲರಿಗೂ ನಮಸ್ಕಾರ. ವೇದಿಕೆಯ ಮೇಲಿನ ವೀರಶೈವ ಲಿಂಗಾಯತ ಧರ್ಮದ, ಪಂಚಪೀಠದ ಜಗದ್ಗುರುಗಳಿಗೆ ಹಾಗೂ ಎಲ್ಲ ಹರ ಗುರು ಚರ ಮೂರ್ತಿಗಳಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಮಾತು ಆರಂಭಿಸಿದರು.

ಕಾಶಿ ಪೀಠದಲ್ಲಿ ವೀರಶೈವ ಮಹಾಕುಂಭದ ಸಮಾರೋಪ ಸಮಾರಂಭದಲ್ಲಿ ವೀರಶೈವ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿಯನ್ನು 19 ಭಾಷೆಗಳಿಗೆ ಅನುವಾದಿಸಿರುವ ನೂತನ ಮೊಬೈಲ್​ ಆ್ಯಪ್​ನ್ನು ಪ್ರಧಾನಿ ಬಿಡುಗಡೆಗೊಳಿಸಿದರು.

ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಶಾಮನೂರು ಶಂಕರಪ್ಪ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಜ್ಯಪಾಲ ಆನಂದಿಬೆನ್​ ಪಟೇಲ್​, ಕಾಶೀ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಉಪಸ್ಥಿತರಿದ್ದರು.

ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ರಾಜ್ಯ ಸೇರಿ ದೇಶದ ವಿವಿಧ ರಾಜ್ಯಗಳಿಂದ ವೀರಶೈವ ಸಮುದಾಯದವರು ಉಪಸ್ಥಿತರಿದ್ದರು. ಕಾಶಿ ಪೀಠದ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಕೂಡ ಇದೇ ವೇಳೆ ನಡೆಯುತ್ತಿದೆ.

ನಂತರ ಪ್ರಧಾನಿ ಅವರು 30ಕ್ಕೂ ಹೆಚ್ಚು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. 430 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು ಉದ್ಘಾಟಿಸಿದರು. (ಏಜೆನ್ಸೀಸ್​)