ನ್ಯೂಸ್

ಕನ್ನಡ ನಾಡು ನುಡಿಗೆ ಭವ್ಯ ಪರಂಪರೆಯಿದೆ; ಚನ್ನಮಲ್ಲಿಕಾರ್ಜುನ ಸ್ವಾಮೀಜಿ

Haveri - Kariyappa Aralikatti

ರಾಣೆಬೆನ್ನೂರ: ಕನ್ನಡ ನಾಡು, ನುಡಿ, ಸಾಹಿತ್ಯ ಸಂಗೀತ ಮತ್ತು ಸಂಸ್ಕೃತಿಗೆ ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹಾಗೂ ಪರಂಪರೆಯಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಇಲ್ಲಿನ ವಾಗೀಶ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ವಾರ್ಷಿಕ ಕಾರ್ತಿಕೋತ್ಸವ ಹಾಗೂ ಸುಗಮ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪಾಶ್ಚಿಮಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ನಮ್ಮ ಭಾರತೀಯ ಪರಂಪರೆಯ ನಿಜ ಸಂಸ್ಕೃತಿಯು ಸರಿಯುವಂತಾಗಿದೆ. ಕಲೆ ಮತ್ತು ಕಲಾವಿದರು ನಾಡಿನ ಸಂಸ್ಕೃತಿ ಹರಿಕಾರರು, ಕಲಾಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಪ್ರಯತ್ನ ಮಾಡಬೇಕಿದೆ. ಜತೆಗೆ ಮಠ ಮಂದಿರಗಳು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಮುಂದಾಗಬೇಕು ಎಂದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಜಣ್ಣ ಮೋಟಗಿ ಅಧ್ಯಕ್ಷತೆ ವಹಿಸಿದ್ದರು.
ಸದಸ್ಯರಾದ ವಿರುಪಾಕ್ಷಪ್ಪ ಅಂಗಡಿ, ಶರಣಪ್ಪ ಮುಚಡಿ, ಜ್ಯೋತಿ ಅಂಗಡಿ, ನಾಗರಾಜ ಮೋಟಗಿ, ಗೌರಿಶಂಕರ ಶೆಟ್ಟರ, ನಾಗರಾಜ ಮುಂಡಾಸದ, ಪಂಚಾಕ್ಷರಿ ಪಟ್ಟಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಲಾವಿದ ಗುಡ್ಡಪ್ಪ ಹಿಂದಿನಮನಿ ಪ್ರಾರ್ಥಿಸಿದರು. ಜಿ.ಜಿ. ಹೊಟ್ಟೆಗೌಡ್ರ ಸ್ವಾಗತಿಸಿದರು. ಬಾಬಣ್ಣ ಐರಣಿಶೆಟ್ಟರ್ ನಿರೂಪಿಸಿದರು.ಪಂಚಾಕ್ಷರಿ ಪಟ್ಟಣಶೆಟ್ಟಿ ವಂದಿಸಿದರು.