ನ್ಯೂಸ್

ಮನೆಯಲ್ಲಿ ಈ ತಪ್ಪುಗಳನ್ನು ಮಾಡಿದರೆ ಲಕ್ಷ್ಮಿದೇವಿಯು ಕೋಪಗೊಳ್ಳುತ್ತಾಳೆ ಎನ್ನುತ್ತೆ ವಾಸ್ತು ಶಾಸ್ತ್ರ| vastu tips

vastu tips; ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ತಪ್ಪುಗಳು ಲಕ್ಷ್ಮಿದೇವಿಯ ಕೋಪಕ್ಕೆ ಕಾರಣವಾಗಿ ಆರ್ಥಿಕ ಮತ್ತು ಮಾನಸಿಕ ಅಶಾಂತಿಯನ್ನು ಉಂಟುಮಾಡಬಹುದು ಎಂದು ನಂಬಲಾಗುತ್ತದೆ. ಮನೆ ನಿರ್ಮಾಣ ಮತ್ತು ಮನೆಯಲ್ಲಿ ಇಡುವ ವಸ್ತುಗಳ ಬಗ್ಗೆ ವಾಸ್ತು ಶಾಸ್ತ್ರವು ಹಲವು ನಿಯಮಗಳನ್ನು ಹೊಂದಿದೆ. ಅಂದಹಾಗೆ, ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ, ಮನೆಯಲ್ಲಿ ವಾಸ್ತು ದೋಷಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ವಾಸ್ತು ದೋಷಗಳು ಮನೆಯಲ್ಲಿ ಅತಿಯಾದ ಹಣವನ್ನು ಖರ್ಚು ಮಾಡಲು ಕಾರಣವಾಗುತ್ತವೆ. ಇದು ಬಡತನಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಮನೆಯಲ್ಲಿ ಆರ್ಥಿಕ ಸಮಸ್ಯೆಗಳನ್ನು ತಪ್ಪಿಸಲು ಅನುಸರಿಸಬೇಕಾದ ವಾಸ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ.

ಮನೆಯನ್ನು ಕೊಳಕಾಗಿಡುವುದು: ಮನೆಯನ್ನು ಅವ್ಯವಸ್ಥಿತವಾಗಿ ಅಥವಾ ಕೊಳಕಾಗಿಡುವುದು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಲಕ್ಷ್ಮಿದೇವಿಯು ಸ್ವಚ್ಛತೆಯನ್ನು ಪ್ರೀತಿಸುತ್ತಾಳೆ ಎಂದು ನಂಬಲಾಗಿದೆ.

ಈಶಾನ್ಯ ದಿಕ್ಕಿನಲ್ಲಿ ಭಾರೀ ವಸ್ತುಗಳು: ಈಶಾನ್ಯ (ಈಶಾನ ಕೋನ) ದಿಕ್ಕನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಕಸ, ಭಾರೀ ವಸ್ತುಗಳು ಅಥವಾ ಶೌಚಾಲಯವನ್ನು ಇಡುವುದು ವಾಸ್ತು ದೋಷವನ್ನು ಉಂಟುಮಾಡುತ್ತದೆ.

ದಕ್ಷಿಣ ದಿಕ್ಕಿನಲ್ಲಿ ಮಲಗುವುದು: ತಲೆಯನ್ನು ದಕ್ಷಿಣಕ್ಕೆ ಇಟ್ಟು ಮಲಗುವುದು ಆರೋಗ್ಯ ಮತ್ತು ಸಂಪತ್ತಿಗೆ ಹಾನಿಕರ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಉತ್ತರಕ್ಕೆ ತಲೆಯಿಟ್ಟು ಮಲಗುವುದು ಶ್ರೇಯಸ್ಕರ.

ಅಡುಗೆಮನೆಯಲ್ಲಿ ಅವ್ಯವಸ್ಥೆ: ಅಡಿಗೆಮನೆಯನ್ನು ಅಶುದ್ಧವಾಗಿಡುವುದು ಅಥವಾ ಒಡದೊಂಗದೆ ಇಡುವುದು ಲಕ್ಷ್ಮಿಯನ್ನು ದೂರವಿಡುತ್ತದೆ. ಅಗ್ನಿಕೋನ (ಆಗ್ನೇಯ) ದಿಕ್ಕಿನಲ್ಲಿ ಅಡಿಗೆ ಇರಬೇಕು ಮತ್ತು ಯಾವಾಗಲೂ ಸ್ವಚ್ಛವಾಗಿರಬೇಕು.

ಮುರಿದ ವಸ್ತುಗಳನ್ನು ಇಡುವುದು: ಮನೆಯಲ್ಲಿ ಮುರಿದ ಪಾತ್ರೆಗಳು, ಗಡಿಯಾರಗಳು ಅಥವಾ ಪೀಠೋಪಕರಣಗಳನ್ನು ಇಡುವುದು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

ಪ್ರವೇಶ ದ್ವಾರದಲ್ಲಿ ಅಡಚಣೆ: ಮನೆಯ ಮುಖ್ಯ ದ್ವಾರವನ್ನು ಅವ್ಯವಸ್ಥಿತವಾಗಿಡುವುದು ಅಥವಾ ಅಡಚಣೆಗಳನ್ನು ಇಡುವುದು ಸಂಪತ್ತಿನ ಹರಿವನ್ನು ತಡೆಯುತ್ತದೆ.

ರಾತ್ರಿಯಲ್ಲಿ ಕಸ ಇಡುವುದು: ರಾತ್ರಿಯ ವೇಳೆ ಕಸವನ್ನು ಮನೆಯಿಂದ ಹೊರಗೆ ಇಡುವುದು ಲಕ್ಷ್ಮಿಯನ್ನು ಅಪಮಾನಿಸುವಂತೆ ಎಂದು ನಂಬಲಾಗುತ್ತದೆ.

ಗೋಡೆಗಳಿಗೆ ಕೊಳಕು ಬಣ್ಣ: ಮನೆಯ ಗೋಡೆಗಳಿಗೆ ಗಾಢ ಮತ್ತು ಕೊಳಕು ಬಣ್ಣಗಳನ್ನು ಬಳಸುವುದು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಲಕ್ಷ್ಮಿಯನ್ನು ಆಕರ್ಷಿಸಲು ತಿಳಿ ಬಣ್ಣಗಳನ್ನು ಬಳಸುವುದು ಒಳ್ಳೆಯದು.

ಈ ಮೇಲೆ ಉಲ್ಲೇಖಿಸಲಾದ ಎಲ್ಲಾ ಮಾಹಿತಿಗಳನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಫಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

ನಲ್ಲಿಯಿಂದ ನೀರು ಸೋರುವುದು: ಶಾಸ್ತ್ರದ ಪ್ರಕಾರ, ಯಾರ ಮನೆಯಲ್ಲಿಯಾದರೂ ನಲ್ಲಿಯಿಂದ ನೀರು ಸೋರುತ್ತಿದ್ದರೆ, ಅದು ಗಮನಾರ್ಹ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಲ್ಲಿಯನ್ನು ತಕ್ಷಣವೇ ದುರಸ್ತಿ ಮಾಡಬೇಕು. ಏಕೆಂದರೆ ಸೋರುವ ನಲ್ಲಿ ವಾಸ್ತು ದೋಷಗಳಿಗೆ ಕಾರಣವಾಗುತ್ತದೆ. ಇದು ಬಡತನಕ್ಕೆ ಕಾರಣವಾಗುತ್ತದೆ.