ತಾಳಿಕೋಟೆ ಶಿವಭವಾನಿ ದೇವಿಯ ವರ್ಧಂತಿ ಮಹೋತ್ಸವ ಅಂಗವಾಗಿ ಪಟ್ಟಣದಲ್ಲಿ ಶಿವಭವಾನಿ ದೇವಿ ಭಾವಚಿತ್ರ ಮೆರವಣಿಗೆ ನಡೆಯಿತು.  
ನ್ಯೂಸ್

ಶಿವಭವಾನಿ ಮಂದಿರದ ವರ್ಧಂತಿ ಮಹೋತ್ಸವ

ತಾಳಿಕೋಟೆ: ಪಟ್ಟಣದ ರಾಜವಾಡೆಯಲ್ಲಿರುವ ತ್ರೀಯ ಮರಾಠ ಸಮಾಜದ ಕುಲದೇವತೆ ಶಿವಭವಾನಿ ಮಂದಿರದ 26ನೇ ವರ್ಧಂತಿ ಮಹೋತ್ಸವ ಸೋಮವಾರ ನಡೆಯಿತು.

ಶಿವಭವಾನಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಪಂಚಾಮೃತಾಭಿಷೇಕ ಬಿಲ್ವಾರ್ಚನೆ, ಪುಷ್ಪಾರ್ಚನೆ, ಅಲಂಕಾರ, ಮಹಾ ಮಂಗಳಾರತಿ ನೆರವೇರಿದವು.

ರಾಜವಾಡೆಯ ಶಿವಭವಾನಿ ಮಂದಿರದಿಂದ ಸುಮಂಗಲೆಯರ ಕುಂಭಮೇಳದೊಂದಿಗೆ ಲ್ಲಕ್ಕಿ ಉತ್ಸವ ಭೀಮನಭಾವಿಗೆ ತೆರಳಿ ಗಂಗಪೂಜೆ ನೆರವೇರಿಸಲಾಯಿತು.

ಶಿವಭವಾನಿ ದೇವಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ನಾಗರಕಲ್ಲ ಬಡಾವಣೆ, ಶಿವಾಜಿ ಮಹಾರಾಜರ ವೃತ್ತ್ತ, ಶ್ರೀವಿಠ್ಠಲ ಮಂದಿರ ರಸ್ತೆ, ಬಾಲಾಜಿ ಮಂದಿರ ರಸ್ತೆ, ಕತ್ರಿ ಬಜಾರ್​ ಮಾರ್ಗವಾಗಿ ಬಸವಣ್ಣ ದೇವರ ಮಂದಿರ ರಸ್ತೆ ಮೂಲಕ ಮರಳಿ ಮಂದಿರಕ್ಕೆ ತಲುಪಿತು.

ಅರ್ಚಕ ಸಂತೋಷ ಭಟ್ಟ ಜೋಶಿ, ಪ್ರತಿಕಭಟ್ಟ ಜೋಶಿ ತಂಡದಿಂದ ಗಣೇಶ ಹಾಗೂ ನವಗ್ರಹ ಪೂಜೆ, ಚಂಡಿಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ನಡೆಯಿತು.

ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯ ಮಾಜಿ, ಶಾಸಕ ಎ.ಎಸ್​.ಪಾಟೀಲ(ನಡಹಳ್ಳಿ), ತ್ರೀಯ ಮರಾಠ ಪರಿಷತ್​ ರಾಜ್ಯ ಉಪಾಧ್ಯ ವಿಜಯಕುಮಾರ ಚವಾಣ್​, ಎಸ್​ಬಿಐ ನಿವೃತ್ತ ವ್ಯವಸ್ಥಾಪಕ ರಂಗನಾಥ ನೂಲೀಕರ, ತಹಸೀಲ್ದಾರ್​ ಕೀರ್ತಿ ಚಾಲಕ್​, ಪುರಸಭೆ ಮುಖ್ಯಾಧಿಕಾರಿ ಮೋಹನ್​ ಜಾಧವ, ತ್ರೀಯ ಮರಾಠ ಸಮಾಜದ ಅಧ್ಯ ಸಂಭಾಜಿರಾವ್​ ವಾಡಕರ, ಉಪಾಧ್ಯ ಅಣ್ಣಾಜಿ ಜಗತಾಪ, ಕಾರ್ಯದರ್ಶಿ ಕಾಶಿರಾಯ ಮೋಹಿತೆ, ಖಜಾಂಚಿ ಎಸ್​.ವಿ. ಸಾಳುಂಕೆ, ಗುಂಡುರಾವ್​ ಜಗತಾಪ, ನಾರಾಯಣ ಸುಭೇದಾರ, ಜಿ.ಟಿ. ೂರ್ಪಡೆ, ಮಾರುತಿ ಘಾಟಗೆ, ಸಂಜೀವ ಕದಂ, ಗುರುರಾಜ ಮಾನೆ, ಸಂಭಾಜಿ ಡಿಸಲೆ, ಧನಂಜಯ ಶಿಂಧೆ, ಶಶೀಧರ ಡಿಸಲೆ, ಅಂಬಾಜಿ ಜಾಧವ, ವಿಠ್ಠಲ ಮೋಹಿತೆ, ವಿಠ್ಠಲ ಶೇವಳಕರ, ನಾರಾಯಣ ಗಾಯಕವಾಡ, ಲಕ್ಷ$್ಮಣ ಶೇವಳಕರ, ಪಾಂಡು ಶೇವಳಕರ, ಅಂಬಾಜಿ, ಪುಂಡಲಿಂಕ ಮೋಹಿತೆ, ರಂಗನಾಥ ನೂಲೀಕರ ಪಾಲ್ಗೊಂಡಿದ್ದರು.

ತಾಳಿಕೋಟೆ ಸಹಕಾರಿ ಬ್ಯಾಂಕ್​ ಅಧ್ಯ&ಉಪಾಧ್ಯ ಮತ್ತು ನಿರ್ದೇಶಕರು ಹಾಗೂ ವಿವಿಧ ಸಮಾಜದ ಮುಖಂಡರನ್ನು ಗೌರವಿಸಲಾಯಿತು.