ನ್ಯೂಸ್

ವಂದೇ ಭಾರತ್​ ರೈಲಿನ ದುರಸ್ತಿ ಕಾರ್ಯ ಪೂರ್ಣ; 24 ಗಂಟೆಯಲ್ಲಿ ಓಡಾಟಕ್ಕೆ ಸಿದ್ಧವಾಯ್ತು ರೈಲು

Bengaluru - General - Rama Kishan K V

ಮುಂಬೈ: ಗುಜರಾತ್ ಮತ್ತು ಮುಂಬೈ ಸೆಂಟ್ರಲ್ ನಡುವಣ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಅ.6 ರಂದು ಬೆಳಗ್ಗೆ 11.15ರ ಸುಮಾರಿಗೆ ಅಪಘಾತಕ್ಕೀಡಾಗಿತ್ತು. ಎಮ್ಮೆಗಳ ಹಿಂಡು ರೈಲ್ವೇ ಹಳಿಯ ಮೇಲೆ ಅಡ್ಡ ಬಂದುದರಿಂದ ಈ ಅಪಘಾತ ಸಂಭವಿಸಿತ್ತು.

ರೈಲು 100 kmph ವೇಗದಲ್ಲಿ ಸಂಚರಿಸುತ್ತಿತ್ತು. ಹೀಗಾಗಿ ದೊಡ್ಡ ಮಟ್ಟದ ಹಾನಿಯಾಗಿರಲಿಲ್ಲ. ರೈಲಿನ ಮುಂಭಾಕ್ಕೆ ಮಾತ್ರ ಹಾನಿಯಾಗಿತ್ತು. ಇದೀಗ ಹಾನಿಯಾದ ಭಾಗದ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಹಾನಿಗೊಳಗಾದ ಭಾಗವನ್ನು ಮುಂಬೈ ಸೆಂಟ್ರಲ್ ಡಿಪೋದಲ್ಲಿ ಸರಿಪಡಿಸಲಾಗಿದೆ. ಅಪಘಾತವಾದ 24 ಗಂಟೆಯಲ್ಲಿ ದುರಸ್ಥಿ ಕಾರ್ಯ ಮುಕ್ತಾಯವಾಗಿದ್ದು, ಸಂಚಾರಕ್ಕೆ ಸಿದ್ಧವಾಗಿದೆ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸೆ.30 ರಂದು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು. ವಂದೇ ಭಾರತ್​ ರೈಲು ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಜತೆಗೆ ಸುಧಾರಿತ ವೇಗವರ್ಧನೆ ಹಾಗೂ ಬ್ರೇಕಿಂಗ್ ಸಾಮರ್ಥ್ಯವನ್ನು ಹೊಂದಿದೆ. (ಏಜೆನ್ಸೀಸ್)