ನ್ಯೂಸ್

ವಂದೇ ಭಾರತ್​ ರೈಲು ತನ್ನ ಸಾಮರ್ಥ್ಯದ ಅರ್ಧಕ್ಕಿಂತ ಕಡಿಮೆ ವೇಗದಲ್ಲಿ ಸಂಚರಿಸುತ್ತಿದೆ! ಕಾರಣ ಬಹಿರಂಗಪಡಿಸಿದ ರೈಲ್ವೇ ಇಲಾಖೆ…

ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಕ್ರಾಂತಿಕಾರವೆನ್ನಿಸಿರುವ ಸೆಮಿ ಹೈಸ್ಪೀಡ್​ ರೈಲು ವಂದೇ ಭಾರತ್​ ಎಕ್ಸ್​ಪ್ರೆಸ್​, ಅದರ ಸಾಮರ್ಥ್ಯದಲ್ಲಿ ಅರ್ಧಕ್ಕಿಂತ ಕಡಿಮೆ ವೇಗದಲ್ಲಿ ಸಂಚುರಿಸುತ್ತಿದೆ. ಈ ರೈಲಿಗೆ ಗರಿಷ್ಠ ವೇಗದಲ್ಲಿ ಸಂಚರಿಸಲು ಹಳಿಗಳು ಪೂರಕವಾಗಿಲ್ಲದಿರುವುದು ಕಾರಣ ಎಂದು ಮಾಹಿತಿ ಹಕ್ಕು ಅರ್ಜಿ (ಆರ್​ಟಿಐ)ಗೆ ನೀಡಿದ ಉತ್ತರದಿಂದ ತಿಳಿದುಬಂದಿದೆ. ಮಧ್ಯಪ್ರದೇಶದ ಚಂದ್ರಶೇಖರ್​ ಗೌರ್​ ಸಲ್ಲಿಸಿದ ಅರ್ಜಿಗೆ ರೈಲ್ವೆ ಇಲಾಖೆ ಈ ಪ್ರತಿಕ್ರಿಯೆ ನೀಡಿದೆ.

ಹಳಿಗಳ ಗುಣಮಟ್ಟ ಕಡಿಮೆ!

  • ವಂದೇ ಭಾರತ್​ ರೈಲು ತಾಸಿಗೆ 180 ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದರೆ, 2021-22ರಲ್ಲಿ ಈ ರೈಲು ಸಂಚರಿಸಿದ ವೇಗ ಸರಾಸರಿ 84.48 ಕಿ.ಮೀ. 2022-23ರಲ್ಲಿ 81.38 ಕಿ.ಮೀ.
  • ಮುಂಬೈ-ಶಿರಡಿ ಮಧ್ಯೆ ಸಂಚರಿಸುವ ವಂದೇ ಭಾರತ್​ ಎಕ್ಸ್​ಪ್ರೆಸ್​ನ ಗರಿಷ್ಠ ವೇಗ 64 ಕಿ.ಮೀ.
  • 2019ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸಂಚಾರ ಆರಂಭವಾದ ನವದೆಹಲಿ-ವಾರಾಣಸಿ ಮಧ್ಯೆಯ ವಂದೇ ಭಾರತ ಎಕ್ಸ್​ಪ್ರೆಸ್​ನ ವೇಗ 95 ಕಿ.ಮೀ.
  • 180 ಕಿ.ಮೀ. ಗರಿಷ್ಠ ಸಾಮರ್ಥ್ಯವಾದರೂ ಹಳಿಗಳ ಗುಣಮಟ್ಟ ಕಡಿಮೆ ಇರುವ ಕಾರಣ 130 ಕಿ.ಮೀ.ಗೆ ಅನುಮತಿ ನೀಡಲಾಗಿದೆ.
  • ವಂದೇ ಭಾರತ್​ ರೈಲನ್ನು ಆರ್​ಡಿಎಸ್​ಒ ವಿನ್ಯಾಸಗೊಳಿಸಿದ್ದು, ಚೆನ್ನೆ$ನ ಐಸಿಎಫ್​​ನಲ್ಲಿ ತಯಾರಾಗುತ್ತದೆ.