ನ್ಯೂಸ್

ಮೌಲ್ಯಾಧಾರಿತ ಶಿಕ್ಷಣ ನೀಡಲಿ

ಸೋಮಲಿಂಗ ತಳವಾರ

ಬೈಲಹೊಂಗಲ: ಗ್ರಾಮೀಣ ಭಾಗದಲ್ಲಿ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಮತ್ತು ಶೆಣಿಕ ಕ್ರಾಂತಿ ಮಾಡಿದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಸತ್ಕಾರ್ಯ ಅವಿಸ್ಮರಣೀಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನಮಠದ ಜಗದ್ಗುರು ಡಾ. ನಿರ್ಮಾಲಾನಂದನಾಥ ಸ್ವಾಮೀಜಿ ಹೇಳಿದರು.

ಸಮೀಪದ ಸುೇತ್ರ ಇಂಚಲ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಶಿವಾನಂದ ಭಾರತಿ ಸ್ವಾಮೀಜಿ 85ನೇ ವರ್ಧಂತಿ ಮಹೋತ್ಸವ, ಶ್ರೀಗಳ 55ನೇ ವರ್ಷದ ಪೀಠಾರೋಹಣ ಹಾಗೂ ಅಖಿಲ ಭಾರತ ವೇದಾಂತ ಪರಿಷತ್​ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ "ಇಹ ಚೇದವೇದಿದಥ ಸತ್ಯಮಸ್ತಿ ನ ಚೇದಿಹಾವೇದಿನ್ಮಹತೀ ವಿನಷ್ಟಿ' ವಿಷಯ ಕುರಿತು ಮಾತನಾಡಿದರು. ಮಕ್ಕಳಿಗೆ ಶ್ರೀಗಳ ಶಿಣ ಸಂಸ್ಥೆ ಕಲಿಕೆಗೆ ವಿುಲ ಅವಕಾಶ ಕಲ್ಪಿಸಿದೆ. ಪೂರ್ವ ಪ್ರಾಥಮಿಕ ಹಂತದಿಂದ ಪದವಿವರೆಗೂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ಮನುಷ್ಯ ಸದಾ ಧರ್ಮದ ತಳಹದಿಯಲ್ಲೇ ನಡೆಯಬೇಕು. ಪಾಲಕರು ಮೌಲ್ಯಾಧಾರಿತ ಶಿಣ ನೀಡುವುದರ ಜತೆಗೆ ಸಂಸ್ಕಾರ ಬೆಳೆಸಬೇಕು. ಸುೇತ್ರ ಇಂಚಲಕ್ಕೂ ಆದಿಚುಂಚನಗಿರಿ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಶ್ರೀಗಳು ನೂರಾರು ವರ್ಷ ಸೌಖ್ಯದಿಂದಿರಲಿ ಎಂದು ಪ್ರಾರ್ಥಿಸಿದರು.

ಇದಕ್ಕೂ ಮೊದಲು ಡಾ. ಶಿವಾನಂದ ಭಾರತಿ ಸ್ವಾಮೀಜಿ, ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಕಷಿ ಮೇಳದ ಮಳಿಗೆಗಳಿಗೆ ಗೋಪೂಜೆ ಮೂಲಕ ಚಾಲನೆ ನೀಡಿದರು. ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೀದರ ಶಿವಕುಮಾರೇಶ್ವರ ಸ್ವಾಮೀಜಿ ಅಧ್ಯತೆ ವಹಿಸಿದ್ದರು.

ಗದಗ ನಿರ್ಭಯಾನಂದ ಸ್ವಾಮೀಜಿ, ಆದಿಚುಂಚನಗಿರಿಮಠದ ಕಾರ್ಯದರ್ಶಿ ಸೌಮ್ಯನಾಥ ಸ್ವಾಮೀಜಿ, ಹುಬ್ಬಳ್ಳಿ ಅಭಿನವ ಸಿದ್ದಾರೂಡ ಸ್ವಾಮೀಜಿ, ಹಂಪಿ ಡಾ.ವಿದ್ಯಾನಂದ ಭಾರತಿ ಸ್ವಾಮೀಜಿ, ಪೂರ್ಣಾನಂದ ಭಾರತಿ ಸ್ವಾಮೀಜಿ, ಮಲ್ಲಾಪುರ ಚಿದಾನಂದ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡರ, ಬಸವರಾಜ ಜನ್ಮಟ್ಟಿ, ಉದ್ಯಮಿ ವಿಜಯ ಮೆಟಗುಡ್ಡ, ಜಿಪಂ ಮಾಜಿ ಅಧ್ಯೆ ವೀಣಾ ಕಾಶಪ್ಪನವರ, ಡಿ.ಬಿ. ಮಲ್ಲೂರ, ಎಸ್​.ಎಂ. ರಾಯನಾಯ್ಕರ, ಎಸ್​.ಎಂ. ರಾಹುತನವರ, ಚಂದ್ರನಾಯ್ಕ ರಾಯನಾಯ್ಕರ, ನಾಗಪ್ಪ ಮೇಟಿ, ಕಾರ್ತಿಕ ಮಲ್ಲೂರ, ಗ್ರಾಪಂ ಅಧ್ಯ ಶಂಕರ ಬಾಗೇವಾಡಿ, ಶಿವಾನಂದ ಬೆಳಗಾಂವಿ, ಮಹಾಂತೇಶ ತುರಮರಿ, ಸಿಪಿಐ ಶಿವಾನಂದ ಗುಡಗನಟ್ಟಿ, ಶಿವಾನಂದ ಪೂಜೇರ, ಭರಮನಾಯ್ಕ ಮಲ್ಲೂರ ಇತರರಿದ್ದರು.