ಸಾಲಿಗ್ರಾಮ: ಯಾವುದೇ ಪಕ್ಷಭೇದ ಮಾಡದೆ ಸಂಘದ ಅಭಿವೃದ್ಧಿಗೆ ಎಲ್ಲ ನಿರ್ದೇಶಕರು ಮತ್ತು ಸದಸ್ಯರು ಸಹಕಾರ ನೀಡುವ ಮೂಲಕ ಸಾಲಿಗ್ರಾಮ ತಾಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಮುಂದಾಗಬೇಕು. ಇದಕ್ಕೆ ನಮ್ಮ ಸಹಕಾರ ಇದೆ ಎಂದು ಕೆ.ಆರ್.ನಗರ ತಾಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಸುಬ್ಬಕೃಷ್ಣ ನಾಯಕ ತಿಳಿಸಿದರು.
ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘದಿಂದ ಹಮ್ಮಿಕೊಂಡಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಕೆ.ಆರ್.ನಗರದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಪ್ರಾರಂಭದಿಂದ ಶ್ರಮಪಟ್ಟ ಅವಳಿ ತಾಲೂಕಿನ ಎಲ್ಲ ಹಿರಿಯರನ್ನು ಗೌರವಿಸುವ ಮೂಲಕ ನಾವೆಲ್ಲರೂ ಕೆಲಸ ಮಾಡೋಣ. ಸಮಾಜದ ಹಿರಿಯರ ಸಲಹೆ, ಸೂಚನೆಗಳನ್ನು ಪಡೆದು ಅಭಿವೃದ್ಧಿಯತ್ತ ಸಾಗೋಣ. ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಮತ್ತು ಪ್ರತಿವರ್ಷ ಹೆಚ್ಚು ಅಂಕ ಪಡೆದು ತೇರ್ಗಡೆಯಾಗುತ್ತಿರುವ ವಿದ್ಯಾರ್ಥಿಗಳನ್ನು ಎಲ್ಲರೂ ಪ್ರೋತ್ಸಾಹಿಸೋಣ ಎಂದರು.
ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಸಿ.ಸಿ. ಮಹದೇವ್, ಉಪಾಧ್ಯಕ್ಷ ವೆಂಕಟೇಶನಾಯಕ, ಕೆ.ಆರ್.ನಗರ ಸಂಘದ ಉಪಾಧ್ಯಕ್ಷ ಸುರೇಶ್ ನಾಯಕ, ಕಾರ್ಯದರ್ಶಿ ಗಣೇಶ್, ಮಂಜು, ಸಂತೋಷ್, ಗೋಬಿ ಶಂಕರ್, ಮಲ್ಲಿಕಾರ್ಜುನ್, ದೇವರಾಜ್, ಪ್ರಕಾಶ್, ಉದೇಶನಾಯಕ, ಕುಮಾರ್, ತಿಮ್ಮನಾಯಕ, ರಾಮನಾಯಕ, ಕುಬೇರ, ಚಂದ್ರನಾಯಕ, ರಮೇಶನಾಯಕ, ಕಾರ್ತಿಕ್ ಇತರರು ಇದ್ದರು.