ನ್ಯೂಸ್

ವಾಲ್ಮೀಕಿ ಯುವ ವೇದಿಕೆಗೆ ಶೀಘ್ರ ನಿವೇಶನ

ಎ. ಆರ್. ರಘುರಾಮ


ಸರಗೂರು: ರತ್ನಾಕರ ವಾಲ್ಮೀಕಿ ಯುವ ವೇದಿಕೆಗೆ ನಿವೇಶನವನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ವೇದಿಕೆ ಹೊರತಂದಿರುವ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮ ಆಯೋಜಿಸಲು ಅವರು ಸಲಹೆ ನೀಡಿದರು.
ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ ರತ್ನಾಕರ ವಾಲ್ಮೀಕಿ ಯುವ ವೇದಿಕೆ ತನ್ನ ಕಾರ್ಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲಿ ಎಂದರು.
ನಾಯಕ ಸಮಾಜದ ತಾಲೂಕು ಅಧ್ಯಕ್ಷ ಪುರದಕಟ್ಟೆ ಬಸವರಾಜು, ಪುರಸಭೆ ಸದಸ್ಯ ನರಸಿಂಹಮೂರ್ತಿ ಮಾತನಾಡಿದರು. ಉದ್ಯಮಿ ನಿಂಗರಾಜು ,ಯುವ ವೇದಿಕೆ ಗೌರವಾಧ್ಯಕ್ಷ ಸ್ವಾಮಿ ಅಂಕನಾಥಪುರ, ಅಧ್ಯಕ್ಷ ವೆಂಕಟಾಚಲ ನಿಲುವಾಗಿಲು, ಉಪಾಧ್ಯಕ್ಷ ಎಂ ಜವರಾಜು ಇತರರು ಇದ್ದರು.