ನ್ಯೂಸ್

24 ವರ್ಷಗಳ ಬಳಿಕ ಮತ್ತೆ ಮಮ್ಮುಟ್ಟಿ ಸಿನಿಮಾ ತೆರೆಗೆ! ಬ್ಲಾಕ್​ಬಸ್ಟರ್​ ಚಿತ್ರದ 4K ರಿಲೀಸ್​ಗೆ ಕ್ಷಣಗಣನೆ

ಕೇರಳ: ಮಾಲಿವುಡ್​ ಚಿತ್ರರಂಗದ ದಿಗ್ಗಜ ನಟ ಮಮ್ಮುಟ್ಟಿ ಅಭಿನಯದ ಬ್ಲಾಕ್​ಬಸ್ಟರ್ 'ವಲ್ಲಿಯೆಟ್ಟನ್' ಸಿನಿಮಾ​, ಇದೀಗ 24 ವರ್ಷಗಳ ಬಳಿಕ ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಲು ಸಜ್ಜಾಗಿದೆ. ಹಿರಿಯ ಚಲನಚಿತ್ರ ನಿರ್ಮಾಪಕ ಶಾಜಿ ಕೈಲಾಸ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವು, 2000ದಲ್ಲಿ ರಿಲೀಸ್​ ಆಗಿ ಸಿನಿಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಅಂದು ಅಪಾರ ಜನಮನ್ನಣೆ ಗಳಿಸಿದ್ದ ಮಮ್ಮುಟ್ಟಿ ಚಿತ್ರ ನಾಳೆ (ನ. 29) ದೊಡ್ಡ ಪರದೆಯ ಮೇಲೆ ಮತ್ತೆ ರಾರಾಜಿಸಲು ಎದುರುನೋಡುತ್ತಿದೆ.

4K ರೆಸಲ್ಯೂಶನ್‌ನಲ್ಲಿ ಸಿದ್ಧವಾಗಿರುವ 'ವಲ್ಲಿಯೆಟ್ಟನ್' ಚಿತ್ರ 24 ವರ್ಷಗಳ ಬಳಿಕ ಮತ್ತೆ ತೆರೆಗೆ ಬರಲು ಸಜ್ಜಾಗಿರುವುದು ನಟನ ಅಭಿಮಾನಿಗಳಲ್ಲಿ ಭಾರೀ ಸಂತಸ ತಂದಿದೆ. ಮತ್ತೊಮ್ಮೆ ಸೂಪರ್​ ಹಿಟ್​ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಸಂಭ್ರಮಿಸಲು ಮಮ್ಮುಟ್ಟಿ ಫ್ಯಾನ್ಸ್ ತುದಿಗಾಲಿನಲ್ಲಿದ್ದಾರೆ. ಈ ಬಗ್ಗೆ ಒಂದು ಸಣ್ಣ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಮಾಲಿವುಡ್​ ಸ್ಟಾರ್​, ಚಿತ್ರವನ್ನು ಆನಂದಿಸಿ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ಮಮ್ಮುಟ್ಟಿ, ಇನ್ನೋಸೆಂಟ್​, ಪೂರ್ಣಿಮಾ ಇಂದ್ರಜಿತ್, ಶೋಬಾನಾ, ಮನೋಜ್ ಕೆ. ಜಯಾನ್​, ಸಾಯಿಕುಮಾರ್​, ಸಿದ್ಧಿಕ್​, ಕಲಾಭಾವನ್​ ಮಣಿ ಸೇರಿದಂತೆ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).