National Condom Day: ಪ್ರತಿ ತಿಂಗಳು ಒಂದಲ್ಲೊಂದು ದಿನ ರಾಷ್ಟ್ರೀಯ ದಿನಗಳನ್ನು ಆಚರಿಸುತ್ತೇವೆ. ಅದರ ಉದ್ದೇಶ, ಕಾರಣ ಮತ್ತು ಸಾಮಾಜಕ್ಕೆ ಒಳಿತಾಗುವ ನಿಟ್ಟಿನಲ್ಲಿ ಡೇಗಳನ್ನು ಆಚರಣೆ ಮಾಡಲಾಗುತ್ತದೆ. ಅದರಂತೆ ಅಂತರಾಷ್ಟ್ರೀಯ ಕಾಂಡೋಮ್ ದಿನವನ್ನು ಕೂಡ ಫೆಬ್ರವರಿಯಲ್ಲಿ ಆಚರಿಸಲಾಗುತ್ತದೆ. ಇದರ ದಿನಾಂಕ, ಕಾರಣ ಮತ್ತು ಯಾವಾಗ ಎಂದು ತಿಳಿಯೋಣ ಬನ್ನಿ..
ಭಾರತದಲ್ಲಿ ಲೈಂಗಿಕ ವಿಚಾರಗಳ ಬಗ್ಗೆ ಇಂದಿಗೂ ಮಾತನಾಡಲು ಜನರು ಹಿಂಜರಿಯುತ್ತಾರೆ. ಅಂತ ಸಂಗತಿಗಳಲ್ಲಿ ಕಾಂಡೋಮ್ ಕೂಡ ಒಂದು. ಇದರ ಬಗ್ಗೆ ಜನರು ಮಾತನಾಡವುದಾಗಲಿ ಮತ್ತು ನಾಲ್ಕು ಜನರ ಗುಂಪಿನಲ್ಲಿ ವಿಚಾರ ಬಂದರೂ ಮುಜುಗರ ಪಡುತ್ತಾರೆ. ಎನ್ಜಿಒ ಮತ್ತು ಸರ್ಕಾರ ಸೇರಿದಂತೆ ಆರೋಗ್ಯ ಇಲಾಖೆ ಕಾಂಡೋಮ್ ಬಗ್ಗೆ ಉಪಯೋಗ ಸೇರಿದಂತೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಆದರೆ, ಮೆಡಿಕಲ್ ಸ್ಟೋರ್ಗಳಲ್ಲಿ ಕೇಳಿ ಪಡೆಯಲು ಅಪರಾಧ ಎಂದು ಭಾವ ಜನರಲ್ಲಿದೆ. ಇದೀಗ ಕಾಂಡೋಮ್ ಬಗ್ಗೆ ಜನರಲ್ಲಿ ಅರಿವು ವ್ಯಾಪಕವಾಗಿ ಹರಿದಾಡುತ್ತಿದ್ದು, ಜನರು ಜಾಗೃತರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಂಡೋಮ್ ಮನುಷ್ಯನ ಜೀವನಕ್ಕೆ ಬಹಳ ಮುಖ್ಯವಾದ ವಿಷಯವಾಗಿದೆ. ಇದು ನಿಮ್ಮ ಕುಟುಂಬ ಯೋಜನೆಯಲ್ಲಿ ಸಹಾಯ ಮಾಡುತ್ತದೆ . ಅಲ್ಲದೆ, ಬಹುಮುಖ್ಯವಾಗಿ ಲೈಂಗಿಕವಾಗಿ ಹರಡುವ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದರಲ್ಲಿ ಏಡ್ಸ್ ನಂತಹ ಅಪಾಯಕಾರಿ ಕಾಯಿಲೆಗಳೂ ಕೂಡ ಸೇರಿವೆ.ಈ ಕಾರಣಕ್ಕಾಗಿಯೇ ಪ್ರತಿ ವರ್ಷ ಕಾಂಡೋಮ್ ದಿನಾಚರಣೆ ಮಾಡಲಾಗುತ್ತದೆ.
ಸಾಮಾನ್ಯವಾಗಿ ಫೆ.14ರಂದು ಪ್ರೇಮಿಗಳ ದಿನಾಚರಣೆ(Lovers Day)ದಿನದಂದೇ ಕಾಂಡೋಮ್ ದಿನವನ್ನು ವಿಶ್ವದ್ಯಾಂತ ಆಚರಣೆಯನ್ನು ಮಾಡಲಾಗುತ್ತದೆ. ಕಾರಣ ಸುರಕ್ಷಿತ ಲೈಂಗಿಕತೆ ಉದ್ದೇಶದಿಂದ ಮತ್ತು ಕಾಂಡೋಮ್ ಬಳಸುವುದರಿಂದ ಆಗುವ ಲಾಭ, ಹಾಗೂ ಅದರ ಮಹತ್ವವನ್ನು ತಿಳಿಯುವ ಉದ್ದೇಶದಿಂದ ಫೆ.14ರಂದು ಕಾಂಡೋಮ್ ಡೇ ಆಚರಿಸಲಾಗುತ್ತದೆ.
ಅಷ್ಟೇ ಅಲ್ಲ, ಲೈಂಗಿಕವಾಗಿ ಹರಡುವ ರೋಗಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಅವುಗಳನ್ನು ತಡೆಗಟ್ಟುವ ಮಾರ್ಗಗಳ ಬಗ್ಗೆ ತಿಳಿಸಲು ರಾಷ್ಟ್ರೀಯ ಕಾಂಡೋಮ್ ದಿನವನ್ನು ಸಹ ಆಚರಿಸಲಾಗುತ್ತದೆ. 2013 ರಲ್ಲಿ ಏಡ್ಸ್ ಹೆಲ್ತ್‌ಕೇರ್ ಫೌಂಡೇಶನ್ ಈ ದಿನವನ್ನು ಆಚರಿಸಲು ಪ್ರಾರಂಭಿಸಿತು.
ಇದನ್ನೂ ಓದಿ:ಭಾರತೀಯ ಆಟಗಾರರೊಂದಿಗೆ ಮಾತ್ರ… Champions Trophy ಹೊಸ್ತಿಲಲ್ಲೇ ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಮಾಜಿ ಕೋಚ್
ಕಾಂಡೋಮ್‌ಗಳ ಪ್ರಾಮುಖ್ಯತೆ, ಸುರಕ್ಷಿತ ಲೈಂಗಿಕತೆ, ಅನಪೇಕ್ಷಿತ ಗರ್ಭಧಾರಣೆಯನ್ನು ತಪ್ಪಿಸುವುದು ಮತ್ತು ಕುಟುಂಬ ಯೋಜನೆ ಕುರಿತು ಪ್ರಪಂಪಚದಾದ್ಯಂತ ಎಲ್ಲಾ ಯುವಕರಿಗೆ ಅರಿವು ಮೂಡಿಸಲು ರಾಷ್ಟ್ರೀಯ ಕಾಂಡೋಮ್ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.(ಏಜೆನ್ಸೀಸ್)