ನ್ಯೂಸ್

6 ಕೇಂದ್ರಗಳಲ್ಲಿ ಮಾತ್ರ ಲಸಿಕೆ

Dakshina Kannada

ಮಂಗಳೂರು: ಪ್ರಥಮ ಹಂತದಲ್ಲಿ 16ರಂದು ದಕ್ಷಿಣ ಕನ್ನಡ ಜಿಲ್ಲೆಯ ಆರು ಕೇಂದ್ರಗಳಲ್ಲಿ ಮಾತ್ರ ಕರೊನಾ ವಾರಿಯರ್‌ಗಳಿಗೆ ಕರೊನಾ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.

ಜಿಲ್ಲಾ ಆಸ್ಪತ್ರೆ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಸುರತ್ಕಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪ್ರಥಮ ದಿನ ಲಸಿಕೆ ನೀಡುವ ಕೇಂದ್ರಗಳು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

ಈ ದಿನದ ಫೀಡ್‌ಬ್ಯಾಕ್ ನೋಡಿಕೊಂಡು ಲಸಿಕೆ ಕೇಂದ್ರಗಳ ಹೆಚ್ಚಳ ಮತ್ತು ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯತೆ ಇದೆ. ಲಸಿಕೆ ಪಡೆಯಲು 42,300ಕ್ಕೂ ಅಧಿಕ ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದು, 30 ಕೇಂದ್ರಗಳಲ್ಲಿ ಲಸಿಕೆ ನೀಡಲು ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧತೆ ಮಾಡಿತ್ತು. ಈ ನಡುವೆ ನೋಂದಣಿ ಅವಧಿಯನ್ನು ಮಂಗಳವಾರ ರಾತ್ರಿ 12 ಗಂಟೆವರೆಗೆ ವಿಸ್ತರಿಸಲಾಗಿದ್ದು, ಇನ್ನಷ್ಟು ಮಂದಿ ನೋಂದಣಿ ಮಾಡಲಿದ್ದಾರೆ. ಕರೊನಾ ಲಸಿಕೆ ಬೆಂಗಳೂರಿಗೆ ಸೋಮವಾರ ರಾತ್ರಿ ಅಥವಾ ಮಂಗಳವಾರ ಆಗಮಿಸಲಿದೆ. ಅದಾಗಿ ಒಂದೆರಡು ದಿನದೊಳಗೆ ದ.ಕ. ಜಿಲ್ಲೆೆಗೆ ಪೂರೈಕೆಯಾಗಬಹುದು ಎನ್ನುತ್ತಾಾರೆ ಅಧಿಕಾರಿಗಳು.

ಲಸಿಕೆ ಸಂಗ್ರಹಕ್ಕೆೆ ಜಿಲ್ಲೆಯ ಪ್ರಾಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆೆ, ಆರೋಗ್ಯ ಕೇಂದ್ರ ಸೇರಿದಂತೆ ಇದುವರೆಗೆ 515 ಕಡೆಗಳಲ್ಲಿ ವ್ಯವಸ್ಥೆೆ ಮಾಡಲಾಗಿದೆ. 100ಕ್ಕಿಂತ ಕಡಿಮೆ ಲಸಿಕೆ ಬೇಡಿಕೆಯಿರುವ ಕಡೆಗಳಲ್ಲಿ 2-3 ಕೇಂದ್ರಗಳನ್ನು ವಿಲೀನಗೊಳಿಸಲು ನಿರ್ಧರಿಸಲಾಗಿದೆ.

ಕರಾವಳಿಯಲ್ಲಿ 11 ಹೊಸ ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 10 ಕರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಈ ದಿನ ಸೋಂಕಿನಿಂದ ಸಾವು ಸಂಭವಿಸಿಲ್ಲ. ವಿವಿಧ ಆಸ್ಪತ್ರೆ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 29 ಮಂದಿ ಗುಣ ಹೊಂದಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯ ತನಕ ದಾಖಲಾದ ಪಾಸಿಟಿವ್ ಪ್ರಕರಣಗಳು 33,265. ಗುಣವಾದವರು 32,087. ಸಕ್ರಿಯ ಪ್ರಕರಣಗಳು 446. ಇಲ್ಲಿವರೆಗೆ ಜಿಲ್ಲೆಯಲ್ಲಿ 22,404 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, 23,73,370 ರೂ. ದಂಡ ವಿಧಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಂದು ಕೋವಿಡ್ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ರೋಗ ಲಕ್ಷಣ ಹೊಂದಿರುವ ರೋಗಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 1635 ಮಂದಿಯ ವರದಿ ನೆಗೆಟಿವ್ ಬಂದಿದ್ದು, 20 ಮಂದಿ ಗುಣವಾಗಿದ್ದಾರೆ. ಸದ್ಯ 80 ಸಕ್ರಿಯ ಪ್ರಕರಣಗಳಿವೆ.