ನ್ಯೂಸ್

ಉಚಿತ ತುರ್ತು ಆಂಬುಲೆನ್ಸ್ ಸೇವೆಗೆ ಸಂಸದ ಶ್ರೀನಿವಾಸಪ್ರಸಾದ್ ಚಾಲನೆ

ಮೈಸೂರು: ಸಾಮಾಜಿಕ ಸೇವಾ ಉದ್ದೇಶದಿಂದ ಡಾ.ಎನ್.ಎಸ್.ಮೋಹನ್ ಸ್ನೇಹ ಬಳಗ, ಪ್ರಲಕ್ಷ ಚಾರಿಟಬಲ್ ಟ್ರಸ್ಟ್ ಹಾಗೂ ಪ್ರಲಕ್ಷ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಆರಂಭಿಸಲಾಗಿರುವ ಉಚಿತ ತುರ್ತು ಆಂಬುಲೆನ್ಸ್ ಸೇವೆಗೆ ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಶುಕ್ರವಾರ ಚಾಲನೆ ನೀಡಿದರು.

ಗಣರಾಜ್ಯೋತ್ಸವದ ಅಂಗವಾಗಿ ನಗರದ ಜಯಲಕ್ಷ್ಮೀಪುರಂ ನಿವಾಸದಲ್ಲಿ ಚಾಮರಾಜನಗರದ ಲೋಕಸಭಾ ವ್ಯಾಪ್ತಿಗಾಗಿ ಎರಡು ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿದ ಶ್ರೀನಿವಾಸಪ್ರಸಾದ್ ಅವರು, ಡಾ.ಎನ್.ಎಸ್.ಮೋಹನ್ ಸ್ನೇಹ ಬಳಗದ ಅಧ್ಯಕ್ಷರೂ ಅದ ಚಾಮರಾಜನಗರ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ಆರ್.ಲೋಕೇಶ್ ಕುರುಬರಹುಂಡಿ ಅವರಿಗೆ ಕೀ ಹಸ್ತಾಂತರಿಸಿ ಶುಭ ಕೋರಿದರು.

ಆರ್‌ಎಸ್‌ಎಸ್‌ನ ಹಿರಿಯ ಮುಖಂಡರಾದ ಮ.ವೆಂಕಟರಾಂ, ದತ್ತೇಶ್, ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಡಾ. ಎನ್.ಎಸ್.ಮೋಹನ್, ಮುಖಂಡರಾದ ಡಾ.ರೇವಣ್ಣ ತಿ.ನರಸೀಪುರ , ವೆಂಕಟಸ್ವಾಮಿ ಕೋಟೆ , ಕುಂಬ್ರಳ್ಳಿ ಸುಬ್ಬಣ್ಣ, ಮಹದೇವಪ್ಪ ನಂಜನಗೂಡು, ಸಂಪತ್ ಪಡಗೂರು, ದಯಾನಂದ್ ಪಟೇಲ್ ಬಾಲರಾಜ್ ನಾಯಕ್, ಬಸವರಾಜು ಅಗತಗೌಡನಹಳ್ಳ , ರಾಜು ಯಳಂದೂರು, ಶಿವಪ್ಪಾಜಿ , ಮೂರ್ತಿ, ಮಂಜು, ಕೃಷ್ಣ , ರಾಜು ಹನೂರು , ವೆಂಕಟೇಶ್ ಕೆರಳ್ಳಿ , ಬಸವರಾಜಪ್ಪ ಕಾಡಳ್ಳಿ ಕುಮಾರ್ ಇತರರು ಇದ್ದರು.