ನ್ಯೂಸ್

ಉತ್ಥಾನ ವಾರ್ಷಿಕ ಕಥಾಸ್ಪರ್ಧೆ: ಶಿರಸಿಯ ಕರುಣಾಕರ್​​​ಗೆ ಪ್ರಥಮ ಬಹುಮಾನ

ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಏರ್ಪಡಿಸಿದ್ದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ-2023ರ ಲಿತಾಂಶ ಪ್ರಕಟವಾಗಿದ್ದು, ಉತ್ತರಕನ್ನಡ ಜಿಲ್ಲೆಯ ಶಿರಸಿಯ ಕರುಣಾಕರ ಹಬ್ಬುಮನೆ ಪ್ರಥಮ ಬಹುಮಾನಕ್ಕೆ ಭಾಜನರಾಗಿದ್ದಾರೆ.

ಸ್ಪರ್ಧೆಗೆ ಒಟ್ಟು 352 ಕಥೆಗಳು ಬರಹಾಗಾರರಿಂದ ಸ್ವೀಕರಿಸಲಾಗಿತ್ತು. ಈ ಪೈಕಿ ಕರುಣಾಕರ ಹಬ್ಬುಮನೆ ಅವರ ‘ಅಂತರಂಗದೊಳಗೂ ಒಂದು ಸಮ್ಮಂಧ’ ಕಥೆ ಪ್ರಥಮ ಬಹುಮಾನ (15 ಸಾವಿರ ರೂ.) ಪಡೆದಿದ್ದಾರೆ. ಶಿವಮೊಗ್ಗದ ಮೃತ್ಯುಂಜಯ ಹೊಸಮನೆ ಅವರ ‘ವ್ಯೆಹ’ ಹಾಗೂ ಸಂಪತ್ ಸಿರಿಮನೆ ಅವರ ‘ಮರೀಚಿಕೆ’ ಕಥೆಗಳು ಕ್ರಮವಾಗಿ ಎರಡನೇ ಸ್ಥಾನ (12 ಸಾವಿರ ರೂ.) ಹಾಗೂ 3ನೇ ಸ್ಥಾನ (10 ಸಾವಿರ ರೂ.) ಪಡೆದಿದ್ದಾರೆ.

ಮೆಚ್ಚುಗೆ ಕಥೆಯಾಗಿ ಐವರಿಗೆ ತಲಾ 2 ಸಾವಿರ ರೂ. ಬಹುಮಾನಕ್ಕೆ ಪಾತ್ರರಾಗಿದ್ದಾರೆ. ದಕ್ಷಿಣಕನ್ನಡದ ಜುಬೇರ್ ಅಹಮದ್ ಪರಪ್ಪು, ಅರಸೀಕೆರೆಯ ಡಿ.ಎಸ್.ರಾಮಸ್ವಾಮಿ, ಕಾಸರಗೋಡಿನ ರಾಜಶ್ರೀ ಟಿ ಪೆರ್ಲ ಹಾಗೂ ಬೆಂಗಳೂರಿನ ಡಾ.ವಾಸುದೇವ ಶೆಟ್ಟಿ ಮತ್ತು ಶ್ರೋಲೋಲ ಸೋಮಯಾಜಿ ಅವರ ಕಥೆಗಳು ಆಯ್ಕೆಯಾಗಿವೆ. ಸದ್ಯದಲ್ಲೇ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುವುದು ಎಂದು ಉತ್ಥಾನ ಪ್ರಧಾನ ಸಂಪಾದಕ ಎಸ್.ಆರ್.ರಾಮಸ್ವಾಮಿ ತಿಳಿಸಿದ್ದಾರೆ.