ಉತ್ತರಾಖಂಡ: ಕಳೆದ ವಾರ ಉತ್ತರಾಖಂಡದ ಹಲ್ದ್ವಾನಿಯ ಬನ್‌ಭೂಲ್‌ಪುರದಲ್ಲಿ ಅಕ್ರಮವಾಗಿ ನಿರ್ಮಿಸಿದ ಮದರಸಾವನ್ನು ಅಧಿಕಾರಿಗಳು ಧ್ವಂಸಗೊಳಿಸಿದ ಹಿನ್ನೆಲೆ ಸ್ಥಳೀಯರಿಂದ ತೀವ್ರ ಪ್ರತಿಭಟನೆಗಳು ಸಂಭವಿಸಿದ್ದು, ಕಲ್ಲು ತೂರಾಟದಿಂದ ಗಲಭೆ ಹಿಂಸಾಚಾರಕ್ಕೆ ತಿರುಗಿತು. ಇದೀಗ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ (ಫೆ.11) 25 ಜನರನ್ನು ಬಂಧಿಸಿದ್ದಾರೆ. ಇಲ್ಲಿಯವರೆಗೆ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಈಗ 30ಕ್ಕೆ ಏರಿದೆ.
ಇದನ್ನೂ ಓದಿ: ಯುಪಿಪಿಎಸ್ಸಿ ಪರೀಕ್ಷೆಯಲ್ಲಿ ಪೇಪರ್ ಲೀಕ್! ಆರೋಪ ನಿರಾಕರಿಸಿದ ನೇಮಕಾತಿ ಸಂಸ್ಥೆ, ಗೊಂದಲದಲ್ಲಿ ಅಭ್ಯರ್ಥಿಗಳು
ಇದೆಲ್ಲದರ ನಡುವೆ ಉತ್ತರಾಖಂಡ ಸರ್ಕಾರವು ಹಲ್ದ್ವಾನಿಯಲ್ಲಿ ಹೆಚ್ಚಿನ ಕೇಂದ್ರ ಪಡೆಗಳನ್ನು ನಿಯೋಜಿಸುವ ಅಗತ್ಯಯಿದ್ದು, ಕೇಂದ್ರ ಸರ್ಕಾರ ಹೆಚ್ಚುವರಿ ಪಡೆಗಳನ್ನು ಕಳುಹಿಸಿಕೊಡಬೇಕು ಎಂದು ಕೋರಿದೆ ಎಂದ ಅಧಿಕಾರಿಗಳು, ಸುಮಾರು 100 ಸಿಬ್ಬಂದಿಯನ್ನು ಒಳಗೊಂಡಂತೆ ಕೇಂದ್ರ ಅರೆಸೇನಾ ಪಡೆಗಳನ್ನು ಬಂಭೂಲ್ಪುರದಲ್ಲಿ ನಿಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಸದ್ಯ ನಗರ ಪ್ರದೇಶದಲ್ಲಿ ಗಲಭೆ ನಿಯಂತ್ರಣಕ್ಕೆ ಬಂದಿದ್ದು, ಸಹಜಸ್ಥಿತಿಗೆ ಮರುಳಿದೆ. ಹಿಂಸಾಚಾರದ ಹಿನ್ನೆಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತಾರ್ಜಾಲ ಸಂಪರ್ಕವನ್ನು ಕಡಿತಗೊಳಿಸಿ, ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಇದೀಗ ಎಲ್ಲವೂ ಯತಾಸ್ಥಿತಿಗೆ ಹಿಂತಿರುಗಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರಯಲಾಗಿದೆ ಮತ್ತು ಇಂಟರ್‌ನೆಟ್ ಸಂಪರ್ಕವನ್ನು ಕೂಡ ಪುನರ್‌ಸ್ಥಾಪಿಸಲಾಗಿದೆ,(ಏಜೆನ್ಸೀಸ್).