ನ್ಯೂಸ್

100 ಅಡಿ ಆಳದ ಕಂದಕಕ್ಕೆ ಬಿದ್ದ ಬಸ್​​; ನಾಲ್ವರು ಸಾವು.. 21 ಮಂದಿಗೆ ಗಾಯ | Uttarakhand

ಡೆಹ್ರಾಡೂನ್​​: ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಭೀಮತಾಲ್ ಪ್ರದೇಶದಲ್ಲಿ ಬುಧವಾರ(ಡಿಸೆಂಬರ್​​ 25) ರಸ್ತೆಮಾರ್ಗದ ಬಸ್ 100 ಮೀಟರ್ ಆಳದ ಕಂದಕಕ್ಕೆ ಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿದ್ದು ಮತ್ತು 21 ಮಂದಿ ಗಾಯಗೊಂಡಿದ್ದಾರೆ.

ರಸ್ತೆ ಮಾರ್ಗದ ಬಸ್ ಪಿಥೋರಗಢದಿಂದ ಹಲ್ದ್ವಾನಿಗೆ ಹೋಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಬಸ್ ಆಳವಾದ ಕಂದಕಕ್ಕೆ ಬಿದ್ದಿದೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ರಕ್ಷಿಸಲಾಗಿದೆ. 21 ಜನರು ಗಾಯಗೊಂಡಿದ್ದಾರೆ ಮತ್ತು 4 ಜನರು ಸಾವನ್ನಪ್ಪಿದ್ದಾರೆ ಎಂದು ನೈನಿತಾಲ್‌ನ ಪೊಲೀಸ್ ಅಧೀಕ್ಷಕ ಡಾ ಜಗದೀಶ್ ಚಂದ್ರ ತಿಳಿಸಿದ್ದಾಗಿ ಎಎನ್​ಐ ವರದಿ ಮಾಡಿದೆ.

ವಿಡಿಯೋದಲ್ಲಿ ರಾಜ್ಯ ವಿಪತ್ತು ಪರಿಹಾರ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದನ್ನು ನೊಡಬಹುದಾಗಿದೆ.

ಭೀಮ್ಟಾಲ್ ಬಳಿ ದುರದೃಷ್ಟಕರ ಬಸ್ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಇದು ಅತ್ಯಂತ ಹೃದಯ ವಿದ್ರಾವಕವಾಗಿದೆ. ಗಂಭೀರವಾಗಿ ಗಾಯಗೊಂಡ ಜನರು ಹಲ್ದ್ವಾನಿಯ ಸುಶೀಲಾ ತಿವಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ಏಮ್ಸ್ ರಿಷಿಕೇಶದ ವೈದ್ಯರ ತಂಡವನ್ನು ಹಲ್ದ್ವಾನಿಗೆ ಕಳುಹಿಸಲಾಗಿದೆ. ಎಲ್ಲಾ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.(ಏಜೆನ್ಸೀಸ್​)