ನ್ಯೂಸ್

ಕರೊನಾವೈರಸ್​ಗೆ ಬಲಿಯಾದ ಉತ್ತರ ಪ್ರದೇಶದ ಮತ್ತೊಬ್ಬ ಸಚಿವ!

ಲಕ್ನೋ: ಕರೊನಾವೈರಸ್​ ಸೋಂಕಿನಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಬಿಜೆಪಿ ಮುಖಂಡ ಹಾಗೂ ಸಚಿವ ಹನುಮಾನ್ ಮಿಶ್ರಾ (60) ಅವರು ಮಂಗಳವಾರ ಮೃತಪಟ್ಟಿದ್ದಾರೆ. ಅವರು ಸಹಕಾರ ಸಚಿವರಾಗಿದ್ದರು. ಅಲ್ಲದೇ ಅವರು ಉತ್ತರ ಪ್ರದೇಶದ ಕೋ ಆಪರೇಟಿವ್ ಯೂನಿಯನ್​​ನ ಅಧ್ಯಕ್ಷರೂ ಸಹ ಆಗಿದ್ದರು.

ಕಳೆದ ಒಂದು ವಾರದ ಹಿಂದೆ ಕರೊನಾ ಸೋಂಕಿಗೆ ತುತ್ತಾಗಿದ್ದ ಮಿಶ್ರಾ, ಲಕ್ನೋದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳದಿದ್ದಾರೆ.

ಇದರೊಂದಿಗೆ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದ ಮೂವರು ಕೋವಿಡ್​ಗೆ ಬಲಿಯಾದಂತಾಗಿದೆ. ಸಚಿವರಾಗಿದ್ದ ಕಮಲ್ ರಾಣಿ ವರುಣ್ ಹಾಗೂ ಚೇತನ್ ಚೌಹಾಣ್ ಅವರು ಕೋವಿಡ್​ನಿಂದ ಕಳೆದ ವರ್ಷ ಮೃತಪಟ್ಟಿದ್ದರು.

ಉತ್ತರ ಪ್ರದೇಶದಲ್ಲೂ ಕೂಡ ಕರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಸೋಮವಾರ ಸುಮಾರು 28 ಸಾವಿರ ಜನಕ್ಕೆ ಸೋಂಕು ತಗುಲಿತ್ತು. ಮಹಾರಾಷ್ಟ್ರ ಹೊರತುಪಡಿಸಿದರೇ ಅತಿ ಹೆಚ್ಚು ಪ್ರಮಾಣದಲ್ಲಿ ಉತ್ತರ ಪ್ರದೇಶದಲ್ಲಿ ಕರೊನಾ ಪಾಸಿಟಿವ್ ಕಂಡು ಬರುತ್ತಿವೆ.