ನ್ಯೂಸ್

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಉತ್ತರಕನ್ನಡ ಜಿಲ್ಲಾಧಿಕಾರಿ ತೀವ್ರ ಅಸ್ವಸ್ಥ; ವೇದಿಕೆ ಮೇಲೆಯೇ ಕುಸಿದುಬಿದ್ದ ಡಾ. ಹರೀಶ್​ ಕುಮಾರ್​

ಉತ್ತರಕನ್ನಡ: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಡಾ. ಹರೀಶ್​ಕುಮಾರ್ ತೀವ್ರ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದಾರೆ.

ಕಾರವಾರದ ವಾರ್ತಾ ಇಲಾಖೆ ಕಚೇರಿಯಲ್ಲಿ ನಡೆದ ವಾರ್ತಾ ಸ್ಪಂದನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಆಗಮಿಸಿದ್ದರು. ಸಮಾರಂಭದ ಪ್ರಾರಂಭದಲ್ಲೇ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಆದರೆ ಅಲ್ಲಿಯೇ ಸುಧಾರಿಸಿಕೊಂಡು ಕುಳಿತಿದ್ದರು.

ಬಳಿಕ ವೇದಿಕೆಯಲ್ಲಿ ಕುಳಿತಿದ್ದಂತೆ ಅಸ್ವಸ್ಥರಾಗಿ ಕುಸಿದಿದ್ದಾರೆ. ಅಲ್ಲಿದ್ದವರು ಜಿಲ್ಲಾಧಿಕಾರಿಯನ್ನು ಮಲಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಡಾ. ಹರೀಶ್​ ಅವರು ಕೆಲದಿನಗಳಿಂದ ನಿರಂತರವಾಗಿ ಓಡಾಟ ನಡೆಸುತ್ತಿದ್ದರು ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)