ನ್ಯೂಸ್

ಕಾಂಗ್ರೆಸ್‌ನ ಸ್ವಾರ್ಥಕ್ಕೆ ಜನರ ತೆರಿಗೆ ಹಣ ಬಳಕೆ: ಪಿ.ರಾಜೀವ್ ತಕರಾರು | Congress party has sunk to the lowest level

ಬೆಂಗಳೂರು: ಎಐಸಿಸಿ ಶತಮಾನೋತ್ಸವ ನೆಪದಲ್ಲಿ ಕಾರ್ಯಕ್ರಮ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ, ಸ್ವಾರ್ಥ ರಾಜಕೀಯಕ್ಕೆ ರಾಜ್ಯದ ಜನರ ತೆರಿಗೆ ಹಣ ಬಳಸುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಕರಾರು ಎತ್ತಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರಿಗೆ ರಾಷ್ಟ್ರಪಿತ ಅಥವಾ ಮಹಾತ್ಮ ಎಂಬ ಪದ ಬಳಸುತ್ತಿಲ್ಲ. ಗಾಂಧಿ ಭಾರತವೆಂದು ಸಾರುತ್ತಿದ್ದು, ಯಾವ ಗಾಂಧಿ ? ಎಂದು ಪ್ರಶ್ನಿಸಿದರು.

ಗಾಂಧಿ ಹೆಸರೊಂದೇ ಬಳಸಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಎಂದು ಜನರು ಅರ್ಥ ಮಾಡಿಕೊಳ್ಳಲಿ ಎಂಬ ಕಾರಣಕ್ಕೆ ರಾಷ್ಟ್ರಪಿತ ಅಥವಾ ಮಹಾತ್ಮ ಪದ ಬಳಕೆ ಕೈಬಿಟ್ಟಿದ್ದು, ಕಾಂಗ್ರೆಸ್‌ನ ಕುಟಿಲ ನೀತಿಯಿದು ಎಂದು ಟೀಕಿಸಿದರು.

ತಳಮಟ್ಟಕ್ಕೆ ಕುಸಿದ ಕಾಂಗ್ರೆಸ್

ರಾಜ್ಯದ ಅಭಿವೃದ್ಧಿ, ಸುರಕ್ಷತೆ, ಜನರ ಬವಣೆಗೆ ಸ್ಪಂದಿಸುವುದನ್ನು ಸರ್ಕಾರ ಕೈಬಿಟ್ಟಿದೆ. ಜನರ ತೆರಿಗೆ ಹಣದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಷ್ಟ್ರಪಿತ ಇಲ್ಲವೇ ಮಹಾತ್ಮ ಎಂಬ ಪದ ಬಳಕೆ ಸೌಜನ್ಯವೂ ತೋರಿಸದ ಕಾಂಗ್ರೆಸ್ ಪಕ್ಷ ಎಷ್ಟು ತಳಮಟ್ಟಕ್ಕೆ ಇಳಿದಿದೆ ಎನ್ನುವುದು ತಿಳಿಯುತ್ತದೆ.

ಮೈಕ್ರೋ ೈನಾನ್ಸ್ ಕಂಪನಿಗಳ ಕಿರುಕುಳ, ಬಳ್ಳಾರಿಯಲ್ಲಿ ವೈದ್ಯರ ಅಪಹರಣ, ದರೋಡೆಗಳು, ಆತ್ಮಹತ್ಯೆಗಳು, ಅಮಾಯಕರ ಬಂಧನ ಪ್ರಕರಣಗಳು ಕಾನೂನು-ಸುವ್ಯವಸ್ಥೆ ಕುಸಿತ, ವಿಲ ಗೃಹ ಸಚಿವ ಎನ್ನುವುದು ದೃಢಪಡಿಸುತ್ತದೆ ಎಂದು ಪಿ.ರಾಜೀವ್ ಛೇಡಿಸಿದರು.