ನ್ಯೂಸ್

ಮಣ್ಣಿನ ಮಡಕೆ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗ..? ನೀವು ಈ ಅಭ್ಯಾಸ ರೂಢಿಸಿಕೊಳ್ಳಿ..

ಬೆಂಗಳೂರು: ಮಣ್ಣಿನ ಮಡಕೆಯಲ್ಲಿನ ನೀರು ಯಾರು ಕುಡಿದಿಲ್ಲ ಹೇಳಿ..? ಮಣ್ಣಿನ ಮಡಕೆಗಳಲ್ಲಿ ನೀರನ್ನು ಸಂಗ್ರಹಿಸಿ ಬಳಸುವುದು ಪ್ರಪಂಚದಾದ್ಯಂತದ ಅನೇಕ ಸಮುದಾಯಗಳಲ್ಲಿ ಸಾಂಸ್ಕೃತಿಕ ಮತ್ತು ಪರಂಪರೆಯ ಮಹತ್ವವನ್ನು ಹೊಂದಿದೆ. ಇದು ನಮ್ಮ ಸಂಸ್ಕೃತಿಯ ಬೇರುಗಳಿಗೆ ನಮ್ಮನ್ನು ಸಂಪರ್ಕಿಸುವುದು ಮಾತ್ರವಲ್ಲದೆ ಸುಸ್ಥಿರ ಜೀವನ ಪದ್ಧತಿ ರೂಢಿಸಿಕೊಳ್ಳುವಂತೆ ಮಾಡುತ್ತದೆ. ಅನೇಕ ಕುಟುಂಬಗಳು ಕುಡಿಯುವ ನೀರನ್ನು ತಂಪಾಗಿರಿಸಲು ಮಡಿಕೆಗಳಲ್ಲ ಸಂಗ್ರಹಿಸುತ್ತವೆ. ಮಣ್ಣಿನ ರುಚಿಯನ್ನು ಹೊಂದಿರುವ ಈ ನೀರು ತಕ್ಷಣವೇ ಬಾಯಾರಿಕೆಯನ್ನು ನೀಗಿಸುತ್ತದೆ, ಅದಷ್ಟೇ ಅಲ್ಲದೆ ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಎಂಬುದು ನಿಮಗೆ ಗೊತ್ತಿದೆಯೇ..?

ಮಡಕೆ ನೀರಿನಿಂದ ಏನೆಲ್ಲಾ ಪ್ರಯೋಜನ..?

  • ರೆಫ್ರಿಜರೇಟರ್‌ ಬದಲಿಗೆ ಮಣ್ಣಿನ ಮಡಕೆಗಳು ಮೇಲ್ಮೈಯಿಂದ ನೀರು ಆವಿಯಾಗಲು ಅನುಮತಿಸುವ ಸರಂಧ್ರ ಸ್ವಭಾವವನ್ನು ಹೊಂದಿದ್ದು, ನೈಸರ್ಗಿಕವಾಗಿ ನೀರನ್ನು ತಂಪಾಗಿಸುತ್ತದೆ. ಅಲ್ಲದೆ ಸರಂಧ್ರ ಸೂಕ್ಷ್ಮ ವಿನ್ಯಾಸವು ನೀರಿನಲ್ಲಿನ ಮಾಲಿನ್ಯಕಾರಕಗಳನ್ನು ನಿರ್ಬಂಧಿಸುತ್ತದೆ ಮತ್ತು ಅದನ್ನು ಕುಡಿಯಲು ತುಲನಾತ್ಮಕವಾಗಿ ಸುರಕ್ಷಿತಗೊಳಿಸುತ್ತದೆ.
  • ನಾವು ಸೇವಿಸುವ ಹೆಚ್ಚಿನ ಆಹಾರವು ದೇಹದಲ್ಲಿ ಆಮ್ಲೀಯವಾಗುತ್ತವೆ ಮತ್ತು ವಿಷವನ್ನು ಸೃಷ್ಟಿಸುತ್ತವೆ. ಜೇಡಿಮಣ್ಣು ಪ್ರಕೃತಿಯಲ್ಲಿ ಕ್ಷಾರೀಯವಾಗಿದ್ದು ಅದು ಆಮ್ಲೀಯ ಆಹಾರಗಳೊಂದಿಗೆ ಸೇರಿ ದೇಹದ pH ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಂಬಂಧಿತ ಸಮಸ್ಯೆಯನ್ನು ದೂರವಿಡುತ್ತದೆ.
  • ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿದ ನೀರು ಯಾವುದೇ ರೀತಿಯ ರಾಸಾಯನಿಕಗಳನ್ನು ಹೊಂದಿರುವುದಿಲ್ಲ, ಆದ್ದರಿಂದ ಪ್ರತಿದಿನ ಮಣ್ಣಿನ ಮಡಕೆ ನೀರನ್ನು ಕುಡಿಯುವುದರಿಂದ ಚಯಾಪಚಯವನ್ನು ಹೆಚ್ಚಿಸುತ್ತದೆ. ಅತ್ಯಂತ ತಣ್ಣನೆಯ ನೀರು ರಕ್ತನಾಳಗಳನ್ನು ಬಿಗಿಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ತಡೆಯುತ್ತದೆ, ಆದರೆ ಮಣ್ಣಿನ ಮಡಕೆ ನೀರುವ ಸ್ವಲ್ಪ ತಂಪಾಗಿರುತ್ತದೆ, ಈ ನೀರಿನಲ್ಲಿ ಇರುವ ಖನಿಜಗಳ ಕಾರಣದಿಂದಾಗಿ ಜೀರ್ಣಕ್ರಿಯೆಯು ಸುಧಾರಿಸುತ್ತದೆ.
  • ರೆಫ್ರಿಜರೇಟರ್‌ನಲ್ಲಿರುವ ತಣ್ಣೀರು ಕುಡಿಯುವುದರಿಂದ ಗಂಟಲಿನಲ್ಲಿ ತುರಿಕೆ ಮತ್ತು ನೋವು ಉಂಟಾಗುತ್ತದೆ. ಆದರೆ ಮಣ್ಣಿನ ಮಡಕೆ ನೀರು ಸೂಕ್ತವಾದ ತಾಪಮಾನ ಹೊಂದಿರುವುದರಿಂದ ಗಂಟಿಲಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.
  • ಉತ್ತಮ ಆರೋಗ್ಯ ಮಾತ್ರವಲ್ಲ ಮಣ್ಣಿನ ಮಡಕೆ ಬಳಸುವುದು ಪರಿಸರ ಮಾಲಿನ್ಯವನ್ನು ತಡೆಗಟ್ಟುತ್ತದೆ. ಇದು ಪ್ಲಾಸ್ಟಿಕ್ ಕಸದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಪ್ಲಾಸ್ಟಿಕ್ ಬಾಟಲಿಗಳ ಉತ್ಪಾದನೆ ಮತ್ತು ಮರು ಬಳಕೆಯಿಂದ ಉಂಟಾಗುವ ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡುತ್ತದೆ ಎಂದು ಜಿಂದಾಲ್ ನೇಚರ್‌ಕ್ಯೂರ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಪ್ರಕೃತಿ ಚಿಕಿತ್ಸಕ ಡಾ.ಶ್ರೀಕಾಂತ್ ಎಚ್‌ಎಸ್ ಹೇಳಿದ್ದಾರೆ. (ಏಜೆನ್ಸೀಸ್​)