ನ್ಯೂಸ್

"Rosemary Oil" ಬಳಸಿ, ಕೂದಲ ಸಮಸ್ಯೆಗಳಿಗೆ ಗುಡ್​ಬೈ ಹೇಳಿ... ಮನೆಯಲ್ಲಿಯೇ ಸುಲಭವಾಗಿ ರೋಸ್ಮರಿ ಆಯಿಲ್ ತಯಾರಿಸುವ ವಿಧಾನ ನಿಮಗಾಗಿ...Beauty Tips

Beauty Tips | ನಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಕೂದಲಿನ ಪಾತ್ರ ಮಹತ್ವದ್ದು. ನೋಡಲು ಎಷ್ಟೇ ಸುಂದರವಾಗಿದ್ದರೂ, ಕೂದಲಿಲ್ಲ ಎಂದರೆ ಕುರೂಪರಂತೆ ಕಾಣುತ್ತಾರೆ. ಹೀಗಾಗಿ ಎಲ್ಲರೂ ತಮ್ಮ ಕೂದಲಿನ ಆರೋಗ್ಯ ಕಾಪಾಡಲು ಹಲವಾರು ಬಗೆಯ ಔಷಧಿ, ಎಣ್ಣೆ, ಬಳಸುತ್ತಾರೆ. ಅದೇ ರೀತಿ ಕೂದಲು ಉದುರುವಿಕೆ ತಡೆಯಲು ರೋಸ್ಮರಿ ಆಯಿಲ್ ತುಂಬ ಸಹಕಾರಿಯಾಗಿದೆ. ಅದನ್ನು ಬಳಸಿ ಹೇಗೆ ನಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುವ ಮಾಹಿತಿ ಇಲ್ಲಿದೆ.

ರೋಸ್ಮರಿ ಆಯಿಲ್ ಪ್ರಯೋಜನ:

ನೆತ್ತಿಯ ರಕ್ತ ಪರಿಚಲನೆ ಸುಧಾರಣೆ: ಇದು ಕೂದಲಿಗೆ ಆಕ್ಸಿಜನ್​​ ಮತ್ತು ಪ್ರೊಟೀನ್​​ಗಳನ್ನು ನೀಡುತ್ತದೆ. ಆರೋಗ್ಯಕರವಾದ ಮತ್ತು ದಟ್ಟವಾದ ಕೂದಲು ಬೆಳೆಯಲು ಇದು ಸಹಾಯ ಮಾಡುತ್ತದೆ.

ತಲೆಹೊಟ್ಟು ನಿವಾರಣೆ: ರೋಸ್ಮರಿ ಆಯಿಲ್ ಕೂದಲು ಉದುರುವಿಕೆಗೆ ಕಾರಣವಾಗುವ ತಲೆಹೊಟ್ಟುನ್ನು ಕಡಿಮೆ ಮಾಡುತ್ತದೆ. ಧೂಳು ಹಾಗೂ ಒತ್ತಡದಿಂದ ಕೂದಲನ್ನು ರಕ್ಷಿಸುತ್ತದೆ.

ಕೂದಲನ್ನು ಬಲಪಡಿಸುತ್ತದೆ: ರೋಸ್ಮರಿ ಆಯಿಲ್ ಕೂದಲಿನ್ನು ಶಾಫ್ಟಾಗಿಡಲು ಮತ್ತು ಕೂದಲಿನ ಡೆಯುವಿಕೆಯನ್ನು ತಡೆಗಟ್ಟುತ್ತದೆ. ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ವಾಸನೆಯನ್ನು ಕಡಿಮೆ ಮಾಡುತ್ತದೆ: ರೋಸ್ಮರಿ ಆಯಿಲ್ ಸುವಾಸನೆ ಭರಿತ ಪರಿಮಳ ನೆತ್ತಿ ಮತ್ತು ಕೂದಲಿನಿಂದ ಕೆಟ್ಟ ವಾಸನೆಯನ್ನು ಮರೆಮಾಚಲು ಸಹಾಯ ಮಾಡುತ್ತದೆ.

ರೋಸ್ಮರಿ ಆಯಿಲ್​​ ಮಾಡುಹುದು ಹೇಗೆ?

ರೋಸ್ಮರಿ ಚಿಗುರುಗಳನ್ನು ತೊಳೆದು, ನೀರಿನಾಶವನ್ನು ತೆಗೆದು ಸ್ವಚ್ಛವಾದ ಬಟ್ಟೆಯಿಂದ ಒಣಗಿಸಿ.

ನಂತರ ರೋಸ್ಮರಿ ಚಿಗುರುಗಳನ್ನು ಹಾಗೂ ತೆಂಗಿನೆಣ್ಣೆ, ಆಲ್ಮಂಡ್​​ ಆಯಿಲ್​​ಅನ್ನು ಜೊತೆ ಸ್ವಲ್ಪ ಪ್ರಮಾಣದ ನೀರನ್ನು ಸೇರಿಸಿ, ಅದನ್ನು ಒಲೆಯ ಮೇಲೆ ಇರಿಸಿ ಮತ್ತು ಕಡಿಮೆ ಉರಿಯಲ್ಲಿ 1-2 ಗಂಟೆಗಳ ಕಾಲ ಬಿಸಿ ಮಾಡಿ.

ಬಿಸಿ ಮಾಡಿದ ನಂತರ, ಗಾಜಿನ ಜಾರ್ ಎಣ್ಣೆಯನ್ನು ಹಾಕಿ ತಣ್ಣಗಾಗಲು ಬಿಡಿ. ರೋಸ್ಮರಿ ಸುವಾಸನೆಯು ಎಣ್ಣೆಯಲ್ಲಿ ಸೇರಿಕೊಳ್ಳುಲು ಕನಿಷ್ಠ ಒಂದು ವಾರ ಬೇಕು. ಹೀಗೆ ಮಾಡಿದ ನಂತರ ಸುವಾಸನೆ ಭರಿತ ರೋಸ್ಮರಿ ಎಣ್ಣೆ ತಯಾರುತ್ತದೆ.

ಇದನ್ನು ಬಳಸುವ ಕ್ರಮ:

ನಿಮ್ಮ ದಿನಚರಿಯಲ್ಲಿ ರೋಸ್ಮರಿ ಆಯಿಲ್ ಬಳಸಿ ಕೂದಲಿನ ಬೆಳವಣಿಗೆಯನ್ನು

ಹೆಚ್ಚಿಸಿಕೊಳ್ಳಲು ಹಲವಾರು ಮಾರ್ಗಗಳಿವೆ.

ಶ್ಯಾಂಪೂ ಅಥವಾ ಕಂಡೀಷನರ್​​​ಗಳಿಗೆ ಸುಮಾರು 5-10 ಹನಿ ರೋಸ್ಮರಿ ಆಯಿಲ್

ಸೇರಿಸಿ, ಸರಿಯಾಗಿ ಅಲ್ಲಾಡಿಸಿ.

ನಿಮ್ಮ ಕೂದಲನ್ನು ತೊಳೆದ ನಂತರ ನಿಧಾನವಾಗಿ ಕೂದಲಿಗೆ ಕಂಡೀಷನರ್ ಹಚ್ಚಿ ಮೆತ್ತಿಗೆ ನಿಧಾನವಾಗಿ ಮಸಾಜ್​​​ ಮಾಡಿ.

ನೆತ್ತಿಗೆ ರೋಸ್ಮರಿ ಆಯಿಲ್​​​ನಿಂದ ನಿಧಾನವಾಗಿ ಮಸಾಜ್ ಮಾಡುವುದರಿಂದ ನಿಮ್ಮ ಕೂದಲು ಎಣ್ಣೆಯಲ್ಲಿನ ಪ್ರೊಟೀನ್​​ಗಳನ್ನು ಹೀರಿಕೊಂಡು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.