ಕೃತಕ ಬುದ್ಧಿಮತ್ತೆ (ಎ.ಐ) ಬಳಕೆ 
ನ್ಯೂಸ್

ಕೃತಕ ಬುದ್ಧಿಮತ್ತೆ (ಎ.ಐ) ಬಳಕೆ ಸೀಮಿತವಾಗಿರಲಿ

Raichur - Reporter - Rachhai Swamy

ಸಿಂಧನೂರು ಇAದಿನ ಮಾಹಿತಿ ಮತ್ತು ತಂತ್ರe್ಞÁನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ(ಎ.ಐ)ಯನ್ನು ಸೀಮಿತವಾಗಿ ಬಳಸಿಕೊಂಡು ನಾವುಗಳು ಅಭಿವೃದ್ಧಿ ಹೊಂದಬೇಕು ಎಂದು ಕಲಮಂಗಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ವೀರೇಶ ಗೋನವಾರ ಹೇಳಿದರು.

ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ವಿe್ಞÁನ ಮತ್ತು ತಂತ್ರe್ಞÁನ ಇಲಾಖೆ, ಉಪಪ್ರಾದೇಶಿಕ ವಿe್ಞÁನ ಕೇಂದ್ರ ಹಾಗೂ ಶಾಲಾ ಶಿಕ್ಷಣ ವತಿಂದ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ನೀಡುತ್ತಾ, ಮನುಷ್ಯ ದೈಹಿಕ ಅಥವಾ ಬೌದ್ಧಿಕವಾಗಿ ನಿರ್ವಹಿಸಬಹುದಾದ ಕೆಲಸವನ್ನು ತಂತ್ರe್ಞÁನ ಆಧಾರಿತವಾದ ಸಾಧನಗಳ ಮೂಲಕ ಮಾಡುವಂತಹ ಅಥವಾ ಮಾಡಿಸುವಂತಹ ಆವಿಷ್ಕಾರವನ್ನು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲï ಇಂಟೆಲಿಜೆನ್ಸï) ಎಂದು ಕರೆಯಲಾಗುತ್ತದೆಂದರು.

ಶಾಲಾ ಮುಖ್ಯಗುರು ಮಲ್ಲಪ್ಪ ಬಾದರ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸರ್ಕಾರ, ನಮ್ಮ ಇಲಾಖೆ ಹಾಗೂ ವಿವಿಧ ಇಲಾಖೆಗಳು ಜÁರಿಗೆ ತರುತ್ತಿರುವ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ e್ಞÁನವನ್ನು ವೃದ್ಧಿಸಿಕೊಳ್ಳಬೇಕು. ಶಾಲೆಯ ವಿದ್ಯಾರ್ಥಿಗಳು ತಾಜ್ಯ ವಸ್ತುಗಳಿಂದ ಅತ್ಯಂತ ಆಕರ್ಷಕ ಮಾದರಿಗಳನ್ನು ಮಾಡಿz್ದÁರೆ. ಈ ದಿನ ಕೃತಕ ಬುದ್ಧಿಮತ್ತೆಯ ಕುರಿತು ಶಿಕ್ಷಕರಾದ ವೀರೇಶ ಗೋನವಾರ ಅವರು ಮನಮುಟ್ಟುವಂತೆ ಉಪನ್ಯಾಸ ನೀಡಿದರು ಎಂದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಸುಭಾಷಚಂದ್ರ ಪತ್ತಾರ, ರವಿಚಂದ್ರ, ಎಂ.ಮಾರುತಿ. ಬಸವರಾಜ ಸೇರಿ ವಿದ್ಯಾರ್ಥಿಗಳು ಇದ್ದರು.