ಖರಾಬು ಜಮೀನನ್ನು ಬಡವರ ನಿವೇಶನಕ್ಕೆ ಬಳಕೆ ಮಾಡುವಂತೆ ಒತ್ತಾಯಿಸಿ ಗೆಳೆಯರ ಬಳಗದ ಡಿ.ಪರಮೇಶ್ವರಪ್ಪ, ಕಲ್ಲೇಶ್, ಲಂಕೇಶ್, ಕಾಂತರಾಜ್, ಶ್ರೀಧರ್, ರವಿ ಮುಂತಾದವರು ಸಿದ್ದಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. 
ನ್ಯೂಸ್

ಖರಾಜು ಜಾಗ ನಿವೇಶನಕ್ಕೆ ಬಳಸಿ

ಶಿವಮೊಗ್ಗ: ಸರ್ಕಾರಿ ಖರಾಬು ಜಮೀನನ್ನು ನಿವೇಶನ ರಹಿತರಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗೆಳೆಯರ ಬಳಗದ ಪದಾಧಿಕಾರಿಗಳು ಮಂಗಳವಾರ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ತಾಲೂಕು ಕಸಬಾ-2 ಹೋಬಳಿಯ ದೇವಕಾತಿಕೊಪ್ಪ ಗ್ರಾಮದ ಸರ್ವೇ ನಂ.114ರಲ್ಲಿ 5.16 ಎಕರೆ ಸರ್ಕಾರಿ ಖರಾಬು ಜಮೀನಿದೆ. ಇದನ್ನು ಸರ್ವೇ ಮಾಡಿಸಿ ನಿವೇಶನ ರಹಿತ ಬಡವರಿಗೆ ಹಂಚಿಕೆ ಮಾಡಬೇಕು. ಈ ಜಮೀನಿನಲ್ಲಿ ಹಲವರು ಮನೆ ನಿರ್ಮಿಸಿಕೊಂಡಿದ್ದಾರೆ. ಇನ್ನೂ ಖಾಲಿ ಜಾಗವಿದೆ. ಪ್ರಭಾವಿಗಳು ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗ್ರಾಮದಲ್ಲಿ ಸುಮಾರು 70 ಮಂದಿ ನಿವೇಶನ ರಹಿತರಿದ್ದಾರೆ. ಜಮೀನು ಅತಿಕ್ರಮಣವನ್ನು ಖುಲ್ಲಾ ಮಾಡಿಸಿ ಅರ್ಹರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಗೆಳೆಯರ ಬಳಗದ ಜಿಲ್ಲಾಧ್ಯಕ್ಷ ಡಿ.ಪರಮೇಶ್ವರಪ್ಪ, ಪದಾಧಿಕಾರಿಗಳಾದ ಲಂಕೇಶ್, ಕಲ್ಲೇಶ್, ಕಾಂತರಾಜ್, ರವಿ, ಗ್ರಾಮಸ್ಥರಾದ ವೆಂಕಟೇಶ್, ಶ್ರೀಧರ್, ದೇವೇಂದ್ರ, ಚಿನ್ನತಂಬಿ ಇತರರಿದ್ದರು.