ನ್ಯೂಸ್

ಮನೆ ಕ್ಲೀನ್​ ಮಾಡಲು ಆ್ಯಪ್ ಮೊರೆ ಹೋದ ಮಹಿಳೆಗೆ ಆಘಾತ! 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸುಲಿಗೆ | Gold Stole

ಮುಂಬೈ: ದೀಪಾವಳಿ ಹಬ್ಬ ಹಿನ್ನೆಲೆ ಅಪಾರ್ಟ್ಮೆಂಟ್​ ಮನೆಯೊಂದನ್ನು ಕ್ಲೀನ್​ ಮಾಡಲು ಬಂದ ಸಿಬ್ಬಂದಿ ಬರೋಬ್ಬರಿ 4 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ( Gold Stole ) ದೊಚಿದ ಘಟನೆ ಬೆಳಕಿಗೆ ಬಂದಿದೆ.

ಅರ್ಬಾಜ್​ ಖಾನ್​ (27) ಎಂಬಾತತನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಕರಣವೊಂದನ್ನು ಉದಾಹರಿಸಿ, ಸೈಬರ್​ ಕ್ರೈಮ್ ವಂಚನೆ ಮಾಡುವವರಿದ್ದಾರೆ. ನಿಮ್ಮನ್ನು ಹೆದರಿಸಿ ಡಿಜಿಟಲ್​ ಅರೆಸ್ಟ್ ಮಾಡುತ್ತಾರೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಪ್ರಕರಣ ದಾಖಲಾಗಿರುವುದು ಆ್ಯಪ್​ಗಳ ಸುರಕ್ಷತೆ ಮತ್ತು ವಿಶ್ವಾಸರ್ಹತೆ ಬಗ್ಗೆ ಕಳವಳವನ್ನು ಎತ್ತಿ ತೋರಿಸುತ್ತದೆ.

ಪ್ರಕರಣದ ಹಿನ್ನೆಲೆ

ಮುಂಬೈನ ದಹಿಸರ್​ನಲ್ಲಿರುವ ರಿಷಿಕೇಶ್​ ಸೊಸೈಟಿಯಲ್ಲಿ ವಾಸಿಸುತ್ತಿರುವ 55 ವರ್ಷದ ಲೀನಾ ಮಾತ್ರೆ ಎಂಬ ಮಹಿಳೆ, ಅ.21ರಂದು ಹಬ್ಬದ ಸಲುವಾಗಿ ಮನೆ ಕ್ಲೀನ್​ ಮಾಡಲು ಆ್ಯಪ್ (NO BROKERS)​ ಮೂಲಕ ಬುಕ್​ ಮಾಡಿ, ಸಿಬ್ಬಂದಿ ಕಳುಹಿಸುವಂತೆ ಕೋರಿದರು. ಈ ಹಿನ್ನೆಲೆ ಮರುದಿನ ಬೆಳಗ್ಗೆ ಮನೆಗೆ ಬಂದ ಸಿಬ್ಬಂದಿ ಮನೆ ಕ್ಲೀನ್​ ಮಾಡುವ ಸೋಗಿನಲ್ಲಿ ಚಿನ್ನಾಭರಣ ಎಗರಿಸಿದ್ದಾರೆ. ಮನೆ ಸಾಮಾನುಗಳನ್ನು ಜೋಡಿಸುವಾಗ ಕಳ್ಳತನ ಆಗಿರುವುದು ಲೀನಾ ಅವರ ಅರಿವಿಗೆ ಬಂದಿದೆ. ಬಳಿಕ ಪೊಲೀಸರಿಗೆ ದೂರು ನೀಡಿದರು.

ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪೊಲೀಸರು ಪ್ಲ್ಯಾಟ್​ನ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನು ಆಧರಿಸಿ ಅರ್ಬಾಜ್​ ಖಾನ್​ ಎಂಬಾತನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಓಂಪ್ರಕಾಶ್​ ಯಾದವ್​ ಮತ್ತು ಅಹ್ಮದ್​ ಸೌದರ್​ ಎಂಬವವರನ್ನು ವಶಕ್ಕೆ ಪಡೆದು ಪ್ರಸ್ತುತ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ನೋ ಬ್ರೋಕರ್​ ಆ್ಯಪ್​ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮುನ್ನ ಆತನ ಹಿನ್ನೆಲೆಯನ್ನು ಪರಿಶೀಲಿಸಿದೆಯೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಸಂಬಂಧ ಪೊಲೀಸ್​ ಅಧಿಕಾರಿ ಸಂದೀಪ್​ ಗೋರ್ಡೆ ಮಾತನಾಡಿ, ಖಾಸಗಿ ನಿವಾಸಗಳಿಗೆ ನಿಯೋಜಿಸುವ ಮುನ್ನ ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಎಲ್ಲ ಸೇವಾ ನೌಕರರ ಹಿನ್ನೆಲೆಯನ್ನು ಪೊಲೀಸರು ಪರಿಶೀಲನೆ ಮಾಡಬೇಕಾದ ಅಗತ್ಯವಿದೆ. ಅಲ್ಲದೆ, 'ನೋಬ್ರೋಕರ್' ಕಂಪನಿ ಈ ಉದ್ಯೋಗಿಗಳನ್ನು ನಿಯೋಜಿಸುವ ಮೊದಲು ಅವರ ಪೂರ್ವಾಪರ ವಿಚಾರಿಸಿದೆಯೇ ಎಂಬುದನ್ನು ಸಹ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಗೋರ್ಡೆ ಹೇಳಿದ್ದಾರೆ. (ಏಜೆನೀಸ್​)