ನ್ಯೂಸ್

ಬರೋಬ್ಬರಿ 2 ಕೋಟಿ ರೂ. ಲಾಟರಿ ಬಹುಮಾನ ಗೆದ್ದ ಮಹಿಳೆಗಿರುವ ಬಯಕೆ ಕೇಳಿದ್ರೆ ಹುಬ್ಬೇರಿಸ್ತೀರಿ!

ವಾಷಿಂಗ್ಟನ್: ಅಮೆರಿಕದ ಕೊಲೊರಾಡೊ ರಾಜ್ಯದಲ್ಲಿ ಕೌಡ್ರೆ ಎಂಬ 27 ಜನರಿರುವ ಸಣ್ಣ ಪಟ್ಟಣದ ಮಹಿಳೆ ಜೋನಿಗೆ 100 ಎಕ್ಸ್ ದಿ ಕ್ಯಾಷ್ ಬೋನಸ್ ಡ್ರಾ' ಲಾಟರಿಯಿಂದ 2 ಕೋಟಿ ರೂ. (2:50 ಲಕ್ಷ ಡಾಲರ್) ಬಹುಮಾನ ಬಂದಿದ್ದು, ಆಕೆ ತನ್ನ ವಿವರವನ್ನು ಬಹಿರಂಗ ಪಡಿಸದಂತೆ ಕಂಪನಿಯಲ್ಲಿ ಕೋರಿದ್ದಾರೆ.

ಆದರೆ, ಲಾಟರಿ ಕಂಪನಿಯವರು ಆಕೆಗೆ ಬಹುಮಾನ ಬಂದಿರುವುದನ್ನು ಫೇಸ್​ಬುಕ್​ನಲ್ಲಿ ಪ್ರಕಟಿಸಿದ್ದಾರೆ. “ಫೇಸ್‌ಬುಕ್ ನೋಡಿ ನನಗೆ ಬಹುಮಾನ ಬಂದಿರುವ ಬಗ್ಗೆಯೇ ಅನುಮಾನ ಇತ್ತು. ಇದು ಹಗರಣದಲ್ಲಿ ಸಿಲುಕಿಸುವ ಹುನ್ನಾರವೋ ಎಂಬ ಅಂತಕವಾಗಿತ್ತು. ನಂತರ ಖುದ್ದಾಗಿ ಲಾಟರಿ ಮೊತ್ತ ನೀಡುವ ಕೇಂದ್ರಕ್ಕೆ ಹೋಗಿ ಖಚಿತಪಡಿಸಿಕೊಂಡೆ. ಅಶ್ಚರ್ಯವಾಯಿತು ಎಂದಿದ್ದಾರೆ.

ಲಾಟರಿ ಸಂಘಟಕರು ಫೋಟೋ ನೀಡುವಂತೆ ತೋರಿದರು. ನನಗೆ ಪ್ರಚಾರ ಬೇಡ. ವಿವರವನ್ನೂ ಬಹಿರಂಗ ಮಾಡಬೇಡಿ ಎಂದು ತಿಳಿಸಿದೆ' ಎಂದು ಜೋನಿ ಹೇಳಿದ್ದಾರೆ. (ಏಜೆನ್ಸೀಸ್​)