Trump: ಅಫ್ಘಾನಿಸ್ತಾನದಲ್ಲಿರುವ ಬಾಗಮ್ ವಾಯುನೆಲೆಯ ನಿಯಂತ್ರಣವನ್ನು ಅಮೆರಿಕ ಮರಳಿ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ(ಸೆ.19) ಹೇಳಿದ್ದಾರೆ.
ನಾಲ್ಕು ವರ್ಷಗಳಿಂದೆ ಯುಎಸ್ಎ ಸೇನಾ ಪಡೆಗಳು ಅಫ್ಘಾನಿಸ್ತಾನದಿಂದ ಹಿಂದೆ ಸರಿದ ಬಳಿಕ ಅಲ್ಲಿ ತಾಲಿಬಾನ್ ಆ ದೇಶವನ್ನು ವಶಪಡಿಸಿಕೊಂಡಿದ್ದು, ಇದೀಗ ತಾಲಿಬಾನ್ ಸರ್ಕಾರ ಅಧಿಕಾರ ನಡೆಸುತ್ತಿದೆ. ನಾಲ್ಕು ವರ್ಷಗಳ ಬಳಿಕ ಇದೀಗ ಅಮೆರಿಕದ ಪಡೆಗಳು ದಕ್ಷಿಣ ಏಷ್ಯಾದ ರಾಷ್ಟ್ರಕ್ಕೆ ಮರಳಬಹುದು ಎಂದು ಸೂಚಿಸಿದ್ದಾರೆ.
"ನಾವು ಅದನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ, ಅಂದಹಾಗೆ, ಅದು ಸ್ವಲ್ಪ ಬ್ರೇಕಿಂಗ್ ನ್ಯೂಸ್ ಆಗಿರಬಹುದು. ಅವರಿಗೆ ನಮ್ಮಿಂದ ಏನಾದರೂ ಬೇಕಾಗಿರುವುದರಿಂದ ನಾವು ಅದನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ" ಎಂದು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದರು .
ತನ್ನ ಪ್ರತಿಸ್ಪರ್ಧಿ ಚೀನಾಕ್ಕೆ ವಾಯುನೆಲೆ ಸಾಮೀಪ್ಯವಿರುವುದರಿಂದ ಅದರ ನಿಯಂತ್ರಣವನ್ನು ಮರಳಿ ಪಡೆಯಲು ಅಮೆರಿಕ ಬಯಸುತ್ತಿದೆ. ನಾವು ಆ ನೆಲೆಯನ್ನು ಮರಳಿ ಬಯಸುತ್ತೇವೆ. ನಾವು ನೆಲೆಯನ್ನು ಬಯಸುವುದಕ್ಕೆ ಒಂದು ಕಾರಣವೆಂದರೆ, ನಿಮಗೆ ತಿಳಿದಿರುವಂತೆ, ಚೀನಾ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವ ಸ್ಥಳದಿಂದ ಅದು ಒಂದು ಗಂಟೆ ದೂರದಲ್ಲಿದೆ" ಎಂದು ಟ್ರಂಪ್ ಹೇಳಿದರು.(ಏಜೆನ್ಸೀಸ್)