ಅಲಬಾಮಾ: ಐದು ವರ್ಷಗಳಿಂದ ಇಬ್ಬರು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ವ್ಯಕ್ತಿಗೆ ಯುಎಸ್ ಜಿಲ್ಲಾ ನ್ಯಾಯಾಲಯವೊಂದು ನೀಡಿದ ಶಿಕ್ಷೆ ಕೇಳಿದರೆ ಹುಬ್ಬೇರುವುದು ಗ್ಯಾರಂಟಿ.
ಆರೋಪಿಯ ಹೆಸರು ಟೈಲರ್ ಮಿಲ್ಲರ್ (32). ಚಿಕ್ಕಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದನ್ನು ಈತ ಒಪ್ಪಿಕೊಂಡ ಬೆನ್ನಲ್ಲೇ ಜಿಲ್ಲಾ ನ್ಯಾಯಾಧೀಶ ಸ್ಕಾಟ್ ಕೂಗ್ಲರ್ ಅವರು ಆತನಿಗೆ 600 ವರ್ಷಗಳ ಜೈಲುಶಿಕ್ಷೆ (ಜೀವಾವಧಿ ಶಿಕ್ಷೆ) ವಿಧಿಸಿದ್ದಾರೆ.
ಮಿಲ್ಲರ್ ಆ ಇಬ್ಬರು ಮಕ್ಕಳನ್ನು 2014ರಿಂದ 2019ರವರೆಗೆ ಸತತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಇದರಿಂದಾಗಿ ಅವರು ಅನಾರೋಗ್ಯಕ್ಕೀಡಾದರು. ನನ್ನ ಕೃತ್ಯದಿಂದ ಅವರ ಬಾಲ್ಯವನ್ನೇ ಕಸಿದೆ ಎಂದೂ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ. ಈತ ಲೈಂಗಿಕ ದೌರ್ಜನ್ಯ ಎಸಗಲು ಪ್ರಾರಂಭಿಸಿದಾಗ ಆ ಮಕ್ಕಳಿಗೆ ಕೇವಲ ನಾಲ್ಕು ವರ್ಷವಾಗಿತ್ತು ಎಂದು ನ್ಯಾಯಾಲಯದ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ. ಇದನ್ನೂ ಓದಿ: ‘ಗೌರಮ್ಮನ ಮಾತಿನ ಹಿಂದೆ ಮುನಿರತ್ನ ಇದ್ದಾರೆ..ನಾವಿನ್ನು ಸುಮ್ಮನೆ ಕೂರೋದಿಲ್ಲ: ಡಿ.ಕೆ.ರವಿ ಮಾವನ ಆಕ್ರೋಶ
ಮಿಲ್ಲರ್ಗೆ ಸೇರಿದ ಸಿಡಿಯಲ್ಲಿ ಸುಮಾರು 102 ಮಕ್ಕಳಿಗೆ ಸಂಬಂಧಪಟ್ಟ ಅಶ್ಲೀಲ ಚಿತ್ರಗಳು ಇದ್ದವು. ಅಕ್ಟೋಬರ್ 2019ರಲ್ಲಿ ಆತನನ್ನು ಬಂಧಿಸಲಾಗಿತ್ತು. (ಏಜೆನ್ಸೀಸ್)