ನ್ಯೂಸ್

ಸ್ಲಿಮ್ ಆಗಿ ಕಾಣಲು 14 ಲಕ್ಷ ರೂ. ಖರ್ಚು ಮಾಡಿ ಪಕ್ಕೆಲುಬುಗಳನ್ನು ತೆಗೆಸಿದ ಯುವತಿ! ಈ ಮೂಳೆಯಿಂದ ಸಿದ್ಧವಾಗಲಿದೆ ಕಿರೀಟ..rib bones

ಅಮೆರಿಕಾ:  ( rib bones ) ಈಗಿನ ಪೀಳಿಗೆಯವರು ಸೌಂದರ್ಯದ ಕುರಿತಾಗಿ ಹೆಚ್ಚಿನ ಗಮನ ಕೊಡುತ್ತಾರೆ.  ಅದಕ್ಕೇ ಸ್ಲಿಮ್ ಆಗೋಕೆ ಏನಾದ್ರೂ ಮಾಡಲು ಸಿದ್ಧರಾಗಿರುತ್ತಾರೆ. ಆದ್ರೆ ಸುಂದರಿಯಾಗಲು  ಅಮೆರಿಕಾದ  ಯುವತಿಯೊಬ್ಬಳು  ನಾಲ್ಕು ಪಕ್ಕೆಲುಬುಗಳನ್ನು ತೆಗೆಸಿದ್ದಾಳೆ.

ಯುವತಿಯೊಬ್ಬಳು ತೆಳ್ಳಗೆ ಕಾಣಲು ತನ್ನ ಸೊಂಟದಿಂದ ನಾಲ್ಕು ಪಕ್ಕೆಲುಬುಗಳನ್ನು ತೆಗೆ ಸಿದ್ದಾಳೆ. ಇದರಿಂದ ಆಕೆ ಹೆಚ್ಚು ಸುಂದರವಾಗಿ..ಸ್ಲಿಮ್ ಆಗಿ ಕಾಣುತ್ತಾಳಂತೆ.  ಈಗ ಆ ಪಕ್ಕೆಲುಬುಗಳಿಂದ ತನಗಾಗಿ ಕಿರೀಟವನ್ನು ಮಾಡಿಕೊಳ್ಳಲಿದ್ದಾಳಂತೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ಚರ್ಚೆಯಲ್ಲಿದೆ.

ಅಮೆರಿಕದ ಕಾನ್ಸಾಸ್ ನಗರದಲ್ಲಿ ವಾಸಿಸುತ್ತಿರುವ 27 ವರ್ಷದ ಟ್ರಾನ್ಸ್ ಯುವತಿ ಎಮಿಲಿ ಜೇಮ್ಸ್, ಮೊದಲಿಗಿಂತ ತೆಳ್ಳಗೆ ಕಾಣುವ ಆಸೆಯನ್ನು ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾಳೆ.  ನಾನು ಸಣ್ಣವಾಗಲು ಪಕ್ಕೆಲುಬುಗಳನ್ನು ತೆಗೆದುಹಾಕಲು ನಿರ್ಧರಿಸಿದೆ . ಇದಕ್ಕಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿದೆ. ಈಗ ತೆಗೆದ ಪಕ್ಕೆಲುಬುಗಳಿಂದ ತನಗಾಗಿ ಕಿರೀಟವನ್ನು ಮಾಡಿಕೊಳ್ಳಲು ಬಯಸುವುದಾಗಿಯೂ ಹೇಳಿದ್ದಾಳೆ.

ನಾಲ್ಕು ಪಕ್ಕೆಲುಬುಗಳನ್ನು ತೆಗೆಯಲು $17,000 (ರೂ. 14 ಲಕ್ಷಕ್ಕೂ ಹೆಚ್ಚು) ವೆಚ್ಚದ ಶಸ್ತ್ರಚಿಕಿತ್ಸೆಗೆ ವ್ಯಯಿಸಬೇಕಾಯ್ತು. ನಂತರ ತನ್ನ ಪಕ್ಕೆಲುಬುನ್ನು ತನಗೆ ಕೊಡುವಂತೆ ವೈದ್ಯರಿಗೆ ಮನವಿ ಮಾಡಿದೆ. ಅವುಗಳಿಂದ ಕಿರೀಟವನ್ನು  ಮಾಡಿಸಿ ನನ್ನ ಆತ್ಮೀಯ ಗೆಳೆಯನಿಗೆ ಕಿರೀಟವನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇನೆ ಎಂದು ಎಮಿಲಿ  ಹೇಳಿದ್ದಾಳೆ.

ಅನೇಕ ನೆಟಿಜನ್‌ಗಳು ಈ ವೀಡಿಯೊಗೆ ಕಾಮೆಂಟ್ ಮಾಡಿದ್ದಾರೆ ಮತ್ತು ಆ ಪಕ್ಕೆಲುಬುಗಳನ್ನು ಬೇಯಿಸಿ ತಿನ್ನಬೇಕು ಎಂದು ಹೇಳಿದ್ದಾರೆ. ಆದರೆ ತನ್ನ ಹಣ, ದೇಹ.. ಇಷ್ಟ ಬಂದಂತೆ ಮಾಡುತ್ತೇನೆ ಎಂದು ಉತ್ತರಿಸಿದ್ದಾಳೆ.