ಅಮೆರಿಕ: ಐಫೋನ್‌ಗಾಗಿ 12 ವರ್ಷದ ಬಾಲಕಿಯೊಬ್ಬಳು ತನ್ನ 8 ವರ್ಷದ ಸಹೋದರಿಯನ್ನು ಕೊಲೆ ಮಾಡಿರುವ ಘಟನೆ ಅಮೆರಿಕದ ಟೆನ್ನೆಸ್ಸೀಯಲ್ಲಿ ನಡೆದಿದೆ. ಐಫೋನ್‌ಗಾಗಿ ಆರಂಭವಾದ ಅಕ್ಕ ತಂಗಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಐಪೋನ್ಗಾಗಿ ಬಾಲಕಿ ತನ್ನ ತಂಗಿಯ ಕತ್ತು ಹಿಸುಕಿ ಕೊಂದಿದ್ದಾಳೆ. ಇದಲ್ಲದೇ ಯಾರೂ ತನ್ನನ್ನು ಅನುಮಾನಿಸಬಾರದು ಎಂದು ತನ್ನ ಕೃತ್ಯವನ್ನು ಮರೆಮಾಚಲು ಪ್ರಯತ್ನಿಸಿದ್ದಾಳೆ. ಆದರೆ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದ್ದು, ಈ ದೃಶ್ಯ ಕಂಡು ಬಾಲಕಿಯ ಪೋಷಕರು ಶಾಕ್ಗೆ ಗುರಿಯಾಗಿದ್ದಾರೆ.
ಮೃತ ಬಾಲಕಿ ಡೆಮಾರಿಯಾ ಹೋಲಿಂಗ್ಸ್‌ವರ್ತ್(8) ಎಂದು ಗುರುತಿಸಲಾಗಿದೆ. ಪೋಷಕರ ದೂರಿನ ಮೇರೆಗೆ ಪೊಲೀಸರು ಬಾಲಕಿಯನ್ನು ಅರೆಸ್ಟ್ ಮಾಡಿದ್ದಾರೆ. ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಕರಣದಡಿಯಲ್ಲಿ ಬಾಲಕಿಯ ವಿರುದ್ಧ ದೂರು ದಾಖಲಾಗಿದೆ.
ಈ ಪ್ರಕರಣದ ತನಿಖೆಯ ವೇಳೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಆರೋಪಿ ಬಾಲಕಿ ತನ್ನ ಸಹೋದರಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಕಂಡುಬಂದಿದೆ.
ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಬಂದಿದ್ದ ಈ ಇಬ್ಬರು ಸಹೋದರಿಯರ ನಡುವೆ ಐಫೋನ್‌ಗಾಗಿ ಜಗಳ ನಡೆದಿದೆ. ಕೋಪಗೊಂಡ ಬಾಲಕಿ ಕತ್ತು ಹಿಸುಕಿ ಕೊಂದಿದ್ದು, ಬಳಿಕ ಸಹೋದರಿಯ ಶವವನ್ನು ಹಾಸಿಗೆಯ ಮೇಲೆ ಯಾರಿಗೂ ಅನುಮಾನ ಬಾರದಂತೆ ಮಲಗಿರುವ ರೀತಿಯಲ್ಲಿ ಜೋಡಿಸಿದ್ದಾಳೆ ಎಂದು ಗಿಬ್ಸನ್ ಜಿಲ್ಲಾ ಅಟಾರ್ನಿ ಫ್ರೆಡ್ರಿಕ್ ಏಜಿ ಹೇಳಿಕೆಯಲ್ಲಿ ತಿಳಿಸಿದೆ.