ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಹಾಗೂ ಉದ್ಯಮಿ ಗೌತಮ್ ಅದಾನಿ ವಿರುದ್ಧ ಭಾರತೀಯ ಮೂಲದ ವೈದ್ಯ ಅಮೆರಿಕದಲ್ಲಿ ಕೇಸು ದಾಖಲಿಸಿದ್ದಾರೆ. ಈ ಮೇರೆಗೆ ಮೂವರಿಗೂ ನೋಟಿಸ್ ಜಾರಿಯಾಗಿದೆ.
ಡಾ. ಲೋಕೇಶ್ ವುಯೂರ್ರು ಎಂಬವರು ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ಫಾರ್ ದ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾದಲ್ಲಿ ಮೇ 24ರಂದು ಕೇಸು ದಾಖಲಿಸಿದ್ದರು. ಈ ಮೇರೆಗೆ ಜುಲೈ 22ರಂದು ಸಮನ್ಸ್ ಜಾರಿಯಾಗಿದ್ದು, ಆ. 4ರಂದು ಈ ಮೂವರಿಗೂ ಅದನ್ನು ರವಾನಿಸಲಾಗಿದೆ.
ಆರೋಪಿಗಳ ಪಟ್ಟಿಯಲ್ಲಿ ವರ್ಲ್ಡ್ ಎಕನಾಮಿಕ್ ಫೋರಮ್ನ ಸ್ಥಾಪಕ ಮತ್ತು ಅಧ್ಯಕ್ಷ ಪ್ರೊ. ಕ್ಲಾಸ್ ಸ್ಕ್ವಾಬ್ ಹೆಸರು ಕೂಡ ಇದೆ. ಭ್ರಷ್ಟಾಚಾರ ಹಾಗೂ ಪೆಗಾಸಸ್ ಸ್ಪೈವೇರ್ ದುರ್ಬಳಕೆ ಆರೋಪ ಹೊರಿಸಿ ಮೂವರ ವಿರುದ್ಧ ಈ ದೂರನ್ನು ನೀಡಲಾಗಿದೆ. ಈ ಮೂವರು ಯುಎಸ್ಗೆ ನಗದು ವರ್ಗಾವಣೆ ಮಾಡುತ್ತಿದ್ದು, ವಿರೋಧಿಗಳ ವಿರುದ್ಧ ಪೆಗಾಸಸ್ ಬಳಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಗಿ ಮೂಲಗಳು ತಿಳಿಸಿವೆ.
- ಏಜೆನ್ಸೀಸ್