Shashi Tharoor : ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳು ನಡೆಯುತ್ತಿರುವಾಗಲೇ, ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.25% ಹೆಚ್ಚುವರಿ ಆಮದು ಸುಂಕ ಮತ್ತು ದಂಡ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಲುವನ್ನು ಅಸಮಂಜಸ ನಿರ್ಧಾರ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕಿಸಿದ್ದಾರೆ.
ಸಂಸತ್ತಿನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, ವ್ಯಾಪಾರ ಮಾತುಕತೆಯ ಸಮಯದಲ್ಲಿ ಭಾರತ ಅಮೆರಿಕದ ಒತ್ತಡಕ್ಕೆ ಸಂಪೂರ್ಣವಾಗಿ ಮಣಿಯಬಾರದು ಎಂದರು.
ಇದನ್ನೂ ಓದಿ:ನಂದಿನಿ ಉತ್ಪನ್ನಗಳ ಮಾರಾಟ ಕೇಂದ್ರ ಉದ್ಘಾಟನೆ
ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸಿದ್ದಕ್ಕಾಗಿ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಮುಂದೆ ಶೇ.35% ಅಥವಾ ಶೇ.45% ವರೆಗೆ ಏರಿಕೆಯಾಗುವ ಸಾಧ್ಯತೆಗಳಿವೆ. ಶೇ.100 ರವರೆಗೂ ಸುಂಕ ವಿಧಿಸುವ ಚರ್ಚೆ ನಡೆಯುತ್ತಿದೆ. ಇದು ನಿಜವಾದರೆ ಅಮೆರಿಕಾದೊಂದಿಗಿನ ಭಾರತದ ವ್ಯಾಪಾರವನ್ನು ನಾಶ ಪಡಿಸುತ್ತದೆ ಎಂದರು.
ಪ್ರಸ್ತುತ ವ್ಯಾಪಾರ ಮಾತುಕತೆಗಳು ನಡೆಯುತ್ತಿರುವುದರಿಂದ, 25% ಹೆಚ್ಚುವರಿ ಸುಂಕ ಕೇವಲ ಚೌಕಾಶಿ ತಂತ್ರವಾಗಿರಬಹುದು. ಒಂದು ವೇಳೆ ಟ್ರಂಪ್ ಹೇಳಿದಂತೆ ನಡೆದುಕೊಂಡರೆ ಭಾರತದ ವ್ಯಾಪರಕ್ಕೆ ಖಂಡಿತವಾಗಿಯೂ ಹಾನಿಯುಂಟಾಗಲಿದೆ. ಸದ್ಯ ಬರುತ್ತಿರುವ ಮಾಹಿತಿಯ ಪ್ರಕಾರ ನಮ್ಮ GDP ಯ ಅರ್ಧದಷ್ಟು ನಷ್ಟವನ್ನು ಅನುಭವಿಸಬಹುದು ಎಂದರು.
ಇದನ್ನೂ ಓದಿ:ಗ್ರಾಹಕರು ಬಿಡಿಸಿಸಿ ಬ್ಯಾಂಕಿನ ಜೀವಾಳ
ನಮ್ಮಲ್ಲಿ ಸುಮಾರು 700 ಮಿಲಿಯನ್ ಭಾರತೀಯರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಅಮೆರಿಕವನ್ನು ಸಂತೋಷಪಡಿಸಲು ನಾವು ಅವರ ಜೀವನೋಪಾಯವನ್ನು ಪಣಕ್ಕಿಡಲು ಸಾಧ್ಯವಿಲ್ಲ. ಅಮೆರಿಕ ನಮ್ಮ ಅಗತ್ಯಗಳನ್ನು ಸಹ ಅರ್ಥಮಾಡಿಕೊಳ್ಳಬೇಕು ಉದಾಹರಣೆ ಸಮೇತ ತಿಳಿಸಿದರು.(ಏಜೆನ್ಸೀಸ್)