ನ್ಯೂಸ್

ಆಸ್ಪತ್ರೆಗೆ ದಾಖಲಾದ 'ಐರಾವತ' ನಟಿ ಊರ್ವಶಿ ರೌಟೇಲಾ; 'ನನಗಾಗಿ ಪ್ರಾರ್ಥಿಸಿ' ಎಂದಳು...

 ಮುಂಬೈ:  ಸ್ಯಾಂಡಲ್​​ವುಡ್​​ ನಟ ದರ್ಶನ್​​ ಅಭಿನಯದ ಐರಾವತ ಸಿನಿಮಾದಲ್ಲಿ ದಚ್ಚುಗೆ ಜೋಡಿಯಾಗಿದ್ದ ನಟಿ ಊರ್ವಶಿ ರೌಟೇಲಾ ಅವರು  ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತಾ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ತಮ್ಮ ಚಿತ್ರಗಳಿಗಿಂತ ತಮ್ಮ ಅಂದ ಮತ್ತು ಫೋಟೋಶೂಟ್​​ ಮೂಲಕವಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ನಟಿಯ ಆಡಿಯೊವೊಂದು ವೈರಲ್ ಆಗಿದ್ದು, ಅದರಲ್ಲಿ ಅವರು ಬಾತ್ರೂಮ್ ವಿಡಿಯೋ ಲೀಕ್ ಆಗಿರುವ ಬಗ್ಗೆ ಮಾತನಾಡಿದ್ದರು. ನಂತರ ನಟಿ ಪ್ರಚಾರದ ಸ್ಟಂಟ್ ಮಾಡಿದ್ದು ಸಿನಿಮಾ ಪ್ರಚಾರದ ಭಾಗವಾಗಿರುವುದು ಬೆಳಕಿಗೆ ಬಂದಿದೆ.

ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ವೈರಲ್ ಆಗಿದೆ. ಈ ವಿಡಿಯೋವನ್ನು ಸ್ವತಃ ನಟಿಯೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ಮತ್ತೊಮ್ಮೆ ಆತಂಕಗೊಂಡಿದ್ದಾರೆ.

 ವಿಡಿಯೋದಲ್ಲಿ ಏನಿದೆ?: ಊರ್ವಶಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆಕೆ ಗಾಯಗೊಂಡಿರುವುದು ಕಂಡು ಬಂದಿದೆ. ಆಸ್ಪತ್ರೆಯ ಐಷಾರಾಮಿ ಕೊಠಡಿಯೊಂದರಲ್ಲಿ ಆಕೆ ಬಾತ್‌ರೋಬ್ ಧರಿಸಿ ಸೋಫಾ ಮೇಲೆ ಕುಳಿತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ಸಂದರ್ಭದಲ್ಲಿ, ಅವರ ಮುಖದ ಮೇಲೆ ಆಕ್ಸಿಜನ್ ಮಾಸ್ಕ್ ಅನ್ನು ಸಹ ಇರಿಸಲಾಯಿತು, ಈ ಮೂಲಕ ಅವರ ಹಲವು ಉಸಿರಾಟದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಈ ವೀಡಿಯೊವನ್ನು ಪೋಸ್ಟ್ ಮಾಡಿದ ಊರ್ವಶಿ ರೌಟೇಲಾ, 'ದಯವಿಟ್ಟು ನನಗಾಗಿ ಪ್ರಾರ್ಥಿಸಿ' ಎಂದು ಬರೆದಿದ್ದಾರೆ. ಈಗ ಊರ್ವಶಿಗೆ ಏನಾಯಿತು ಎಂಬ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ. ಈ ವೀಡಿಯೋ ನೋಡಿ ಅವರ ಕೆಲವು ಅಭಿಮಾನಿಗಳು ಶಾಕ್ ಆಗಿದ್ದರೆ, ಕೆಲವು ಬಳಕೆದಾರರು ಕೂಡ ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ.