ಬೆಂಗಳೂರು: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಬರ್ತ್ಡೇ ಆಚರಿಸಿಕೊಂಡಿದ್ದು 24 ಕ್ಯಾರೆಟ್ ಗೋಲ್ಡ್ ಕೇಕ್ ಕಟ್ ಕಟ್ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಊರ್ವಶಿ ರೌಟೇಲಾ ಈ ಬಾರಿ ಯೊಯೊ ಹನಿಸಿಂಗ್ ಜೊತೆ ಬರ್ತ್ಡೇ ಆಚರಿಸಿ ಚಂದದ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಊರ್ವಶಿ ತನ್ನ 30ನೇ ಹುಟ್ಟುಹಬ್ಬದಂದು ನಿಜವಾದ ಚಿನ್ನದ ಲೇಪಿತ ಕೇಕ್ ಅನ್ನು ಕತ್ತರಿಸಿದ್ದು, ಇದೀಗ ಚರ್ಚೆಯ ವಿಷಯವಾಗಿದೆ.
ಲವ್ ಡೋಸ್ 2 ಸೆಟ್ನಲ್ಲಿ ಬರ್ತ್ಡೇ ಸೆಲೆಬ್ರೇಷನ್. 24 ಕ್ಯಾರೆಟ್ ಗೋಲ್ಡ್ ಕೇಕ್. ಥಾಂಕ್ಯೂ ಹನಿಸಿಂಗ್ ಎಂದು ನಟಿ ಬರೆದುಕೊಂಡಿದ್ದಾರೆ. ರೆಡ್ ರೋಸ್ ಹಾಗೂ ರೆಡ್ ಹಾರ್ಟ್ ಎಮೋಜಿಯನ್ನು ಕೂಡಾ ನಟಿ ಕ್ಯಾಪ್ಶನ್ನಲ್ಲಿ ಸೇರಿಸಿಕೊಂಡಿದ್ದಾರೆ.
ನಟಿ ಬ್ರಾಡ್ ನೆಕ್ಸ್ಟೈಲ್ನ ರೆಡ್ ಗೌನ್ ಧರಿಸಿದ್ದರು. ಅವರು ಖುಷಿಯಲ್ಲಿ ಕೇಕ್ ಕಟ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಹನಿ ಸಿಂಗ್ ಮತ್ತು ಊರ್ವಶಿ ಮಾತ್ರ ಕಾಣಿಸಿದ್ದಾರೆ. ಕೇಕ್ ಗಾತ್ರ ದೊಡ್ಡದಾಗಿದ್ದು ಕಂಪ್ಲೀಟ್ ಕೇಕ್ ಗೋಲ್ಡ್ ಪ್ಲೇಟೆಡ್ ಆಗಿತ್ತು. ಊರ್ವಶಿ ರೌಟೇಲಾ ಅವರ ಹುಟ್ಟುಹಬ್ಬದ ಆಚರಣೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಪ್ರತಿ ವರ್ಷದಂತೆ ಈ ಬಾರಿಯೂ ನಟಿ ತಮ್ಮ ಹುಟ್ಟುಹಬ್ಬಕ್ಕೆ ಹಣ ಖರ್ಚು ಮಾಡಿದ್ದಾರೆ.