ನ್ಯೂಸ್

ಶರ್ಟ್‌ನ್ನೇ ಗೌನ್ ಮಾಡಿಕೊಂಡ ಉರ್ಫಿ! ಹೊಸ ಅವತಾರಕ್ಕೆ ನೆಟ್ಟಿಗರ ಕಾಮೆಂಟ್

ಚಿತ್ರ-ವಿಚಿತ್ರ ಉಡುಗೆ ತೊಡುವ ಮೂಲಕ ಊರ್ಫಿ ಎಲ್ಲರ ಗಮನ ಸಡೆಳೆಯುತ್ತಾಳೆ. ಪ್ರತಿ ಬಾರಿ ಹೊಸ ಹೊಸ ಪರಿಕಲ್ಪನೆಯೊಂದಿಗೆ ಉರ್ಫಿ ಕಾಣಿಸಿಕೊಳ್ಳುತ್ತಾರೆ. ಇದೀಗ ಉರ್ಫಿ ಜಾವೇದ್ ಹೊಸ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಪುರುಷರ ಶರ್ಟ್‌ನ್ನೇ ಗೌನ್ ಮಾಡಿಕೊಂಡಿದ್ದಾರೆ.‘


ಉರ್ಫಿ ಹೊಸ ಗೌನ್ ಶರ್ಟ್ ಕೋಲಾರ್‌ಗಳಿಂದ ಮಾಡಲ್ಪಟ್ಟಿದೆ. ಪಿಂಕ್ ಬಣ್ಣದ ಹಾಫ್ ಶೋಲ್ಡರ್ ಬಾಡಿಕಾನ್ ಗೌನ್ ಡ್ರೆಸ್ ಮೂಲಕ ಉರ್ಫಿ ಸೆಕ್ಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.


ಉರ್ಫಿ ಜಾವೇದ್ ಹೊಸ ಫ್ಯಾಶನ್ ವಿರುದ್ಧ ಟೀಕೆ ಮಾಡಿದ್ದಾರೆ. ಕೆಲವರು ಕಾರ್ಟೂನ್ ನೆಟ್‌ವರ್ಕ್ ಎಂದಿದ್ದಾರೆ. ಮತ್ತೆ ಕೆಲವರು ಈ ಅವತಾರ ಯಾರಿಗಾಗಿ ಎಂದು ಪ್ರಶ್ನಿಸಿದ್ದಾರೆ.


ಉರ್ಫಿಯ ಹೊಸ ಅವತಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಎಂದಿನಂತೆ ಭಾರಿ ಕಮೆಂಟ್ ವ್ಯಕ್ತವಾಗಿದೆ. ಹಲವರು ಹುಡುಗರೆ ಎಚ್ಚರ ನಿಮ್ಮ ಶರ್ಟ್ ಕಾಣೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.


ಇನ್ನು ಕೆಲವರು ಊರ್ಫಿ ಅವರೇ ನಿಮಗೆ ಹಣವಿಲ್ಲ ಎಂದರೆ ಹೇಳಿ. ದಯವಿಟ್ಟು ನಾವು ಹಣ ಕೊಡುತ್ತೇವೆ. ಒಂದೊಳ್ಳೆಯ ಶರ್ಟ್​ ತೆಗೆದುಕೊಳ್ಳಿ’ ಎಂದು ಕೋರಿದ್ದಾರೆ.