ನ್ಯೂಸ್

ತುನಿಷಾ ಸಾವಿಗೆ ಶೀಜನ್​ ಖಾನ್​ ಮೋಸ ಮಾಡಿದ್ದು ಕಾರಣ ಅಲ್ಲ ಎಂದ ಉರ್ಫೀ..!

ಮುಂಬೈ: ತುನಿಷಾ ಶರ್ಮಾಳ ಆಘಾತಕಾರಿ ಆತ್ಮಹತ್ಯೆಯ ಬಗ್ಗೆ ಉರ್ಫಿ ಜಾವೇದ್ ಬಾಂಬ್​ ಸಿಡಿಸಿದ್ದು ತುನೀಷಾ ಸಾವಿಗೆ ಶೀಜನ್ ಖಾನ್ ಕಾರಣ ಅಲ್ಲ ಎಂದಿದ್ದಾರೆ. ಮಹಿಳೆಯರಿಗೆ ಗಟ್ಟಿ ಮನಸ್ಸು ರೂಪಿಸಲು ಸಲಹೆ ನೀಡಿದ ಅವರು ಆತ್ಮಹತ್ಯೆಯ ನಂತರ ದುಃಖ ಕೊನೆಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ತುನೀಷಾ ಕಳೆದ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದು ಆಕೆ ತನ್ನ ಸಹನಟ ಶೀಜಾನ್ ಖಾನ್ ಜೊತೆ ಸಂಬಂಧ ಹೊಂದಿದ್ದಳು. ಆತ್ಮಹತ್ಯೆಗೆ ಪ್ರಚೋದನೆಗಾಗಿ ಬಂಧಿಸಲ್ಪಟ್ಟಿರುವ ಶೀಜನ್​ ಖಾನ್ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ತನ್ನ ಇನ್‌ಸ್ಟಾಗ್ರಾಮ್​ನಲ್ಲಿ ಉರ್ಫಿ “ ತುನಿಷಾ ಪ್ರಕರಣದಲ್ಲಿ 2 ಪರ್ಸೆಂಟ್ಸ್ ಅವನು ತಪ್ಪಾಗಿರಬಹುದು. ಅವನು ಅವಳನ್ನು ಮೋಸ ಮಾಡಿರಬಹುದು ಆದರೆ ಅವಳ ಸಾವಿಗೆ ನಾವು ಅವನನ್ನು ದೂಷಿಸಲು ಸಾಧ್ಯವಿಲ್ಲ. ಜೊತೆಗಿರಲು ಇಷ್ಟಪಡದ ಯಾರನ್ನಾದರೂ ನಿಮ್ಮೊಂದಿಗೆ ಇರುವಂತೆ ಮಾಡಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದಾರೆ.

ಶೀಜಾನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸ್ವಲ್ಪ ಸಮಯದ ಮೊದಲು ತುನಿಷಾ ಜೊತೆಗೆ ಸಂಭಾಷಣೆ ನಡೆಸಿದ್ದರು. ಶೀಜನ್ ಖಾನ್​, ತುನಿಷಾ ಸಾಯುವ 15 ದಿನಗಳ ಮೊದಲು ಬೇರ್ಪಟ್ಟಿದ್ದ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ವರದಿಯಲ್ಲಿ, “ಆರೋಪಿ ಶೀಜಾನ್ ಖಾನ್ ತನಿಖೆಯಲ್ಲಿ ಪೊಲೀಸರಿಗೆ ಸಹಕರಿಸುತ್ತಿಲ್ಲ. ನೇಣು ಹಾಕಿಕೊಳ್ಳುವ ಮೊದಲು ಮೃತರು ಆರೋಪಿ ಶೀಜಾನ್ ಖಾನ್ ಜೊತೆ ಮಾತುಕತೆ ನಡೆಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಉಲ್ಲೇಖಿಸಲಾಗಿದೆ. ಇದೀಗ ಪೊಲೀಸರು ಶೀಜನ್‌ನ ನ್ಯಾಯಾಂಗ ಬಂಧನವನ್ನು ಎರಡು ದಿನಗಳ ಕಾಲ ವಿಸ್ತರಿಸಿದ್ದಾರೆ.

ಮುಂಬೈನ ಮೀರಾ ರೋಡ್ ಸ್ಮಶಾನ ಮೈದಾನದಲ್ಲಿ ತುನಿಷಾ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು . ಶಿವಿನ್ ನಾರಂಗ್, ಅವನೀತ್ ಕೌರ್, ಅಶ್ನೂರ್ ಕೌರ್ ಮತ್ತು ಇತರ ಸ್ನೇಹಿತರು ತುನಿಷಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. (ಏಜೆನ್ಸೀಸ್​)