ನ್ಯೂಸ್

VIDEO | ನಿರ್ಮಾಣ ಹಂತದಲ್ಲಿರುವ ರೈಲ್ವೆ ಕಟ್ಟಡವನ್ನು ಈಜುಕೊಳ ಮಾಡಿಕೊಂಡ ಯುವಕರು; ವಿಡಿಯೋ ವೈರಲ್

ಉರಾನ್: ನಿರ್ಮಾಣ ಹಂತದಲ್ಲಿರುವ ಉರಾನ್​ ಹೊಸ ರೈಲು ನಿಲ್ದಾಣದ ಕಟ್ಟಡದೊಳಗೆ ಮಳೆ ನೀರು ನುಗ್ಗಿದ ಪರಿಣಾಮ ಬಿಲ್ಡಿಂಗ್​​ ಸ್ವಿಮಿಂಗ್ ಪೂಲ್ ರೀತಿ ಆಗಿದ್ದು, ಯುವಕರ ಗುಂಪೊಂದು ಈಜಾಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಉರಾನ್‌ನಲ್ಲಿ ಹೊಸ ರೈಲು ನಿಲ್ದಾಣವನ್ನು ನಿರ್ಮಿಸುವ ನಿರ್ಮಾಣ ಯೋಜನೆಯು ಇದೀಗ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಭಾರಿ ಮಳೆಗೆ ಕಟ್ಟಡ ಈಜುಕೊಳವಾಗಿ ಮಾರ್ಪಟ್ಟಿದೆ. ಸ್ಥಳೀಯ ಯುವಕರು ಈ ಜಾಗವನ್ನು ಕಂಡು ಮೋಜು ಮಾಡಲು ಮುಂದಾಗಿದ್ದು, ಈಜಾಡುತ್ತಿರುವ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಕೆಲವರು ಇದಕ್ಕೆ ಲೈಕ್ ನೀಡಿ ಶೇರ್ ಮಾಡಿದರೆ, ಇನ್ನು ಕೆಲವರು ಕಮೆಂಟ್ ಮಾಡುವ ಮೂಲಕ ಟೀಕಿಸಿದ್ದಾರೆ,(ಏಜೆನ್ಸೀಸ್).