ಕಷಿ ಮಾರಾಟ ಇಲಾಖೆ ನಿರ್ದೇಶಕ, ಕಷಿ ಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ಕಾಪಸಿ ಅವರಿಗೆ ಮುದ್ದೇಬಿಹಾಳ ಎಪಿಎಂಸಿಯ ಬಿ.ಎಸ್​.ಮೇಟಿ, ಮಲ್ಲನಗೌಡ ಬಿರಾದಾರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನಿರ್ದೇಶಕ ಅಶೋಕ ರೇವಡಿ ಮನವಿ ಸಲ್ಲಿಸಿದರು.  
ನ್ಯೂಸ್

ಉಪ ಮಾರುಕಟ್ಟೆ ಮೇಲ್ದರ್ಜೆಗೇರಿಸಿ

Vijayapura - Desk - Shamarao Kulkarni

ಮುದ್ದೇಬಿಹಾಳ: ಎಪಿಎಂಸಿ ಉಪ ಮಾರುಕಟ್ಟೆಯನ್ನು ಮುಖ್ಯ ಮಾರುಕಟ್ಟೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಎಪಿಎಂಸಿ ವರ್ತಕರು ಕೃಷಿ ಮಾರಾಟ ಇಲಾಖೆ ನಿರ್ದೇಶಕ, ಕೃಷಿ ಮಾರಾಟ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ಕಾಪಸಿ ಅವರಿಗೆ ಮನವಿ ಸಲ್ಲಿಸಿದರು.

ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎಪಿಎಂಸಿ ಸಮಸ್ಯೆಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಎಪಿಎಂಸಿ ಪ್ರತಿನಿಧಿಗಳಾಗಿ ಭಾಗವಹಿಸಿದ್ದ ಎಪಿಎಂಸಿ ವರ್ತಕರಾದ ಬಿ.ಎಸ್​.ಮೇಟಿ, ಮಲ್ಲನಗೌಡ ಬಿರಾದಾರ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನಿರ್ದೇಶಕ ಅಶೋಕ ರೇವಡಿ ಅವರು, ಮೊದಲು ಮುದ್ದೇಬಿಹಾಳ ತಾಲೂಕಿನಲ್ಲಿದ್ದ ತಾಳಿಕೋಟೆ ಪಟ್ಟಣದಲ್ಲಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಸ್ಥಾಪಿಸಲಾಗಿತ್ತು. ಈಗ ತಾಳಿಕೋಟೆ ತಾಲೂಕು ಕೇಂದ್ರವಾಗಿ ಬದಲಾಗಿದೆ. ತಾಳಿಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆಯ ೇತ್ರ ವಿಭಜಿಸಿ ಮುದ್ದೇಬಿಹಾಳದಲ್ಲಿ ಸ್ವತಂತ್ರ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪಿಸಬೇಕು ಎಂದು ಕೋರಿದರು.

\ಶಾಸಕ ಸಿ.ಎಸ್​.ನಾಡಗೌಡ ಅವರು 2024ರ ಸೆಪ್ಟೆಂಬರ್​ 29ರಂದು, ಸಹಕಾರ ಸಚಿವ ಕೆ.ಎನ್​.ರಾಜಣ್ಣ ಅವರಿಗೆ ಪತ್ರ ಬರೆದು ನಮ್ಮ ಬೇಡಿಕೆ ಈಡೇರಿಸುವಂತೆ ಕೋರಿದ್ದಾರೆ. ಇದಲ್ಲದೆ ತಾಳಿಕೋಟೆ ಕೇಂದ್ರ ಸಮಿತಿಯಲ್ಲಿ ಎಪಿಎಂಸಿ ಅಧ್ಯರು, ಸದಸ್ಯರು 2008ರ ಆಗಸ್ಟ್​ 7 ರಂದೇ ಮಾರುಕಟ್ಟೆ ವಿಭಜಿಸಿ ಮುದ್ದೇಬಿಹಾಳದಲ್ಲಿ ಮುಖ್ಯ ಮಾರುಕಟ್ಟೆ ಮಾಡಲು ಸರ್ವಸಮ್ಮತ ಠರಾವು ಸ್ವೀಕರಿಸಿದ್ದಾರೆ. ಮುದ್ದೇಬಿಹಾಳ ಉಪಮಾರುಕಟ್ಟೆಯು ಸೆಸ್​ (ಮಾರ್ಕೆಟ್​ ಫೀ) ಸಂಗ್ರಹದಲ್ಲಿ ಮುಂಚೂಣಿಯಲ್ಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.