ಉತ್ತರ ಪ್ರದೇಶ: ಸಾಧುವೊಬ್ಬರು ತಲೆ ಮೇಲೆ ಸೊಲಾರ್ ಫ್ಯಾನ್ ಕಟ್ಟಿಕೊಂಡು ಸಂಚಾರ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಲಕ್ಷ್ಮೀಪುರ ಕೇರಿಯ ಬಳಿ ಸಾಧುವೊಬ್ಬ ತಲೆಗೆ ಸಣ್ಣ ಗಾತ್ರದ ಫ್ಯಾನ್ ಒಂದನ್ನ ಕಟ್ಟಿಕೊಂಡಿದ್ದಾನೆ.
ಇದಕ್ಕೆ ಸಣ್ಣ ಸೊಲಾರ್ ಪ್ಯಾನಲ್ ಅಳವಡಿಸಿಕೊಂಡಿದ್ದಾನೆ. ಸೊಲಾರ್ ಚಾರ್ಜರ್ ಮೂಲಕ ಈ ಫ್ಯಾನ್ ತಿರುಗುತ್ತದೆ.
ಸಾಧುವೊಬ್ಬರ ಈ ಪ್ರಯತ್ನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತೊದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಸಿಲಿನ ತೀವ್ರತೆಯಿಂದ ತಪ್ಪಿಸಿಕೊಳ್ಳಲು ಈ ಉಪಾಯ ಮಾಡಿದೆ ಎಂದು ವಿಡಿಯೋದಲ್ಲಿ ಸಾಧು ಪ್ರತಿಕ್ರಿಯಿಸಿದ್ದಾರೆ.
ಕಠಿಣ ಸಂದರ್ಭದಲ್ಲಿ ಸೃಜನಾತ್ಮಕ ಪರಿಹಾರವನ್ನು ಕಂಡುಕೊಳ್ಳುವುದರಲ್ಲಿ ಭಾರತೀಯರು ನಿಷ್ಣಾತರು. ಸಾಧುವೊಬ್ಬರ ಈ ಪ್ರಯತ್ನ ಮೆಚ್ಚುಗೆಗ ಅರ್ಹವಾಗಿದೆ ಎಂದು ಟ್ವಿಟರ್ನಲ್ಲಿ ಒಬ್ಬರು ಕಮೆಂಟ್ ಮಾಡಿದ್ದಾರೆ.