ನ್ಯೂಸ್

ಮಾಂಸ ತರಲಿಲ್ಲವೆಂದು ಜಗಳವಾಡಿದ ಪತ್ನಿಯ ಕತ್ತು ಸೀಳಿದ ಪತಿ!

ಉತ್ತರಪ್ರದೇಶ: ಇತ್ತೀಚಿನ ದಿನಗಳಲ್ಲಿ ದಂಪತಿ ನಡುವೆ ಸಣ್ಣ-ಪುಟ್ಟ ವಿಚಾರಗಳಿಗೆ ಗಲಾಟೆ ನಡೆಯುತ್ತದೆ. ವಿಚ್ಛೇದನ ಮತ್ತು ಕೊಲೆ ಹಂತಕ್ಕೆ ತಲುಪುತ್ತವೆ. ಆದರೆ ಇಲ್ಲೊಂದು ಜೋಡಿ ನಡುವೆ ಆಗಿರುವ ಗಲಾಟೆ ಕೇಳಿದ್ರೆ ಶಾಕ್ ಆಗುವುದು ಹೌದು. ಪತಿಯೊಬ್ಬ ಮಾಂಸ ತರಲಿಲ್ಲ ಎಂದು ಜಗಳವಾಡಿದ ಪತ್ನಿಯ ಕತ್ತನ್ನು ಸೀಳಿ ಕೊಲೆ ಮಾಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಗುಡ್ಡೋ (30) ಮೃತ ಮಹಿಳೆ. ಆರೋಪಿಯನ್ನು ಸಗೀರ್ ಎಂದು ಗುರುತಿಸಲಾಗಿದೆ. ಈತ ಮಾಂಸದ ವಿಚಾರವಾಗಿ ನಡೆದ ಜಗಳವಾಡಿ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ನಡೆದಿದ್ದೇನು?: ದಂಪತಿ ಮೂವರು ಮಕ್ಕಳೊಂದಿಗೆ ವಾಸವಾಗಿದ್ದರು. ಇಂದು ಪತಿ ಸಗೀರ್ ಮಾಂಸ ತರಲಿಲ್ಲ ಎಂದು ಇಬ್ಬರ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದ್ದು, ಆಕ್ರೋಶಗೊಂಡ ಸಗೀರ್ ಮಕ್ಕಳ ಎದುರೇ ಚಾಕುವಿನಿಂದ ಪತ್ನಿಯ ಕತ್ತು ಸೀಳಿದ್ದಾನೆ. ಮಕ್ಕಳ ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಂದೆ ಸಾಗಿರ್ ತಾಯಿಯನ್ನು ಕೊಲೆ ಮಾಡಿರುವ ಘಟನೆಯನ್ನು ಮಕ್ಕಳು ಪೊಲೀಸರಿಗೆ  ಎಳೆಎಳೆಯಾಗಿ ವಿವರಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಆರೋಪಿಯನ್ನು ಬಂಧಿಸಲಾಗಿದ್ದು, ಅಪರಾಧಕ್ಕೆ ಬಳಸಿದ್ದ ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಸಿಟಿ ಕುಲದೀಪ್ ಗುಣವತ್ ತಿಳಿಸಿದ್ದಾರೆ.